ಕರಾವಳಿ

ಉಂಡ ಮನೆಗೆ ಕನ್ನ ಹಾಕಿದ ಕಿಲಾಡಿ ಜೋಡಿಗಳು ಪೊಲೀಸರ ಬಲೆಗೆ! (Video)

Pinterest LinkedIn Tumblr

ಕುಂದಾಪುರ: ಕೆಲಸಕ್ಕಿದ್ದ ಮನೆಗೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಆರೋಪಿಗಳಿಬ್ಬರನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಪ್ಪುಂದ ಮೂಲದ ಶ್ರೀಧರ್ (32) ಮತ್ತು ಆತನಿಗೆ ಸಹಕರಿಸಿದ ಪ್ರಿಯತಮೆ ಸ್ವಾತಿ (26) ಬಂಧಿತರು.

ಪ್ರಕರಣದ ವಿವರ:
ಜ.20 ಕಂದಾವರ ಗ್ರಾಮದ ಸಟ್ವಾಡಿಯ ನಿವಾಸಿ ದಿನಕರ ಶೆಟ್ಟಿ ಎನ್ನುವರ ಮನೆಯಲ್ಲಿ ನಡೆದ ಕಳ್ಳತನ ಇದಾಗಿದ್ದು ಮನೆಯ ಬಾಗಿಲು ಮುರಿದು ವಜ್ರದ ಕರಿಮಣಿ, 4 ಚಿನ್ನದ ಬಳೆಗಳು, ಚಿನ್ನದ ಸರ, 36 ಸಾವಿರ ನಗದು ಸೇರಿ 3 ಲಕ್ಷದ 56 ಸಾವಿರ ನಗನಗದು ಕಳವು ಮಾಡಲಾಗಿತ್ತು. ಈ ಬಗ್ಗೆ ಸೋಮವಾರ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕ್ಷಿಪ್ರ ಕಾರ್ಯಾಚರಣೆ ಮೂಲಕ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅದೇ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಧರ್ ಹಣದಾಸೆಗೆ ಬಿದ್ದು ಈ ನೀಚ ಕೆಲಸ ಮಾಡಿದ್ದ. ಈತನ ಈ ಕ್ರತ್ಯಕ್ಕೆ ಪ್ರಿಯತಮೆ ಸ್ವಾತಿ ಸಹಕಾರ ನೀಡಿದ್ದಳು.

ಕಾರ್ಯಾಚರಣೆ ತಂಡ..
ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಸಿಪಿಐ ಮಂಜಪ್ಪ ಡಿ.ಆರ್. ಅವರು ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಶ್ರೀಧರ್, ಸುಜಿತ್ ಕುಮಾರ್, ಪದ್ಮಾವತಿ, ದೀಪಾ, ತಾಂತ್ರಿಕ ವಿಭಾಗದ ಸಿಬ್ಬಂದಿ ಶಿವಾನಂದ ಈ ಕಾರ್ಯಾಚರಣೆ ತಂಡದಲ್ಲಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.