ಕರಾವಳಿ

ನಾನು ಕಟ್ಟರ್ ಹಿಂದುತ್ವವಾದಿ, ಬಿಜೆಪಿ ಪಕ್ಷ ಬಿಡಲ್ಲ: ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ

Pinterest LinkedIn Tumblr

ಉಡುಪಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಜೊತೆಯೂ ನಿಕಟವರ್ತಿಯಾಗಿರುವ ನನ್ನ ವಿರುದ್ಧ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸುಳ್ಳು ಸುದ್ದಿ ಬಿತ್ತರಿಸಲಾಗಿದೆ. ಇದೊಂದು ಅಪಪ್ರಚಾರವಷ್ಟೇ. ನಾನು ಪಕ್ಷ ಬಿಡುವುದಿಲ್ಲ, ಬಿ.ಎಸ್.ವೈ. ಒಂದು ತಿಂಗಳಿನಲ್ಲಿ ಮುಖ್ಯಮಂತ್ರಿಯಾಗುವ ಆಶಾವಾದ ನನ್ನದು ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಬಿ.ಎಂ ಸುಕುಮಾರ ಶೆಟ್ಟಿ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಲಿದ್ದಾರೆ, ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡೀಸ್ ಅವರು ಬಿ.ಎಂ.ಎಸ್ ಜೊತೆ ಮಾತುಕತೆ ನಡೆಸಿದ್ದಾರೆಂದು ಸುದ್ದಿ ಬಿತ್ತರವಾಗಿತ್ತು. ಈ ಬಗ್ಗೆ ಉಡುಪಿಯಲ್ಲಿ ಸ್ಪಷ್ಟನೆ ನೀಡಿದ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಇದೆಲ್ಲಾ ಸುಳ್ಳು. ನಾನು ಬಿ.ಎಸ್.ವೈ. ಅವರಿಗೆ ಇಷ್ಟು ಹತ್ತಿರವಿದ್ದು ಪಕ್ಷ ತೊರೆಯಲಾಗುತ್ತದೆಯೇ? ಎಂದು ಪ್ರಶ್ನಿಸಿದರು.

ದೆಹಲಿಗೆ ತೆರಳಿದಾಗ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಜೊತೆ ಹರಿಧ್ವಾರಕ್ಕೆ ತೆರಳಿ ಗಂಗಾಸ್ನಾನ ಮಾಡಿದ್ದು ಇದಕ್ಕಿಂತಲೂ ಜಾಸ್ಥಿ ಹಿಂದುತ್ವವಾಧಿ್ ಬೇಕೆ? ನಾನು ಪಕ್ಷ ಬಿಡುವುದೇ ಇಲ್ಲ. ಕೈ ಮುಗಿದು ಕೇಳಿಕೊಳ್ಳುವೆ ಸುಖಾಸುಮ್ಮನೆ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿ ಹಾಕಬೇಡಿ. ಈ ಹಿಂದೆಯೂ ಸಮುದ್ರ ಸ್ನಾನದ ವಿಡಿಯೋ ಹಾಕಿದ್ದೀರಿ. ಈಗ ಈ ಅಪಪ್ರಚಾರ ಸುದ್ದಿ ಹಾಕಲಾಗಿದೆ. ಮುಂದೆ ಏನು ಹಾಕುತ್ತೀರೋ ತಿಳಿಯದು. ಆದರೂ ಪ್ರಚಾರಕ್ಕೆ ಬರಬೇಕಾದರೂ ಕೂಡ ಯೋಗ ಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.

Comments are closed.