ಅಂತರಾಷ್ಟ್ರೀಯ

ಸಭೆಯೊಂದರಲ್ಲಿ ಕುವೈತ್ ಅಧಿಕಾರಿ ಪರ್ಸ್ ಕದ್ದು ಸಿಕ್ಕಿಬಿದ್ದ ಪಾಕ್ ಅಧಿಕಾರಿ ! ಸಿಸಿಟಿವಿಯಲ್ಲಿ ಸೆರೆ!

Pinterest LinkedIn Tumblr

ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಕಿಸ್ತಾನ ಅಧಿಕಾರಿಯೊಬ್ಬರು ಕುವೈತ್ ಅಧಿಕಾರಿಯ ಪರ್ಸ್ ಕದಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಾಕಿಸ್ತಾನದ ಅಧಿಕಾರಿ ಜರಾರ್ ಹೈದರ್ ಖಾನ್ ಕುವೈತ್ ಅಧಿಕಾರಯ ಪರ್ಸ್ ಕದಿದಿದ್ದಾರೆ. ಜರಾರ್ ಪಾಕಿಸ್ತಾನದ ಗ್ರೇಡ್ 20 ಜಿಒಪಿ ಅಧಿಕಾರಿ. ತಮ್ಮ ಪರ್ಸ್ ಕಳೆದು ಹೋಗಿರುವುದಾಗಿ ಕುವೈತ್ ಅಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಹಾಲ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಹಣಕಾಸು ಸಚಿವರು ಬೇಸರ ವ್ಯಕ್ತಪಡಿಸಿದ್ದು ಅಲ್ಲದೇ ಜರಾರ್ ನನ್ನು ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Comments are closed.