ಮುಂಬೈ

ಸಂಚರಿಸುತ್ತಿದ್ದ ರೈಲಿನಲ್ಲಿ ಅಪಾಯಕಾರಿ ಸಾಹಸ ಮಾಡುತ್ತಾ ಮೊಬೈಲ್ ದೋಚಿದ ಕಳ್ಳರ ಗುಂಪು ! ಇಲ್ಲಿದೆ ವೀಡಿಯೊ…

Pinterest LinkedIn Tumblr

ಮುಂಬೈ: ಮುಂಬೈನ ಲೋಕಲ್ ರೈಲಿನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಯುವಕರ ಗುಂಪೊಂದು ಇದೇ ವೇಳೆ ಪ್ಲಾಟ್ ಫಾರ್ಮ್ ಮೇಲೆ ನಿಂತಿದ್ದ ಪ್ರಯಾಣಿಕನ ಮೊಬೈಲ್ ಕಸಿದಿದ್ದಾರೆ.

https://twitter.com/AmirReport/status/1024570182159593472

ಯುವಕರ ಗುಂಪಿನಲ್ಲಿ ಓರ್ವ ತಮ್ಮ ಅಪಾಯಕಾರಿ ಸ್ಟಂಟ್ ಅನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದು ಇದೇ ವೇಳೆ ಮತ್ತೊಬ್ಬ ಯುವಕ ಮೊಬೈಲ್ ಕಸಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ನಂತರ ಯುವಕರು ತಾವು ಚಿತ್ರಿಸಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ವಿಡಿಯೋವನ್ನು ಕಂಡ ಪೊಲೀಸರು ಮತ್ತು ರೈಲ್ವೆ ಭದ್ರತಾ ಪಡೆ(ಆರ್ಪಿಎಫ್) ಯುವಕರ ಗುಂಪನ್ನು ಬಂಧಿಸಿದೆ.

ಇದಕ್ಕೂ ಮುನ್ನ ಬೆಂಗಳೂರು ರೈಲಿನಲ್ಲಿ ಯುವಕನೊರ್ವ ರೈಲಿನ ಕಿಟಕಿಯನ್ನು ಹಿಡಿದುಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.

Comments are closed.