ಅಂತರಾಷ್ಟ್ರೀಯ

ಪ್ರವಾಹದಿಂದ ಆಹಾರವಿಲ್ಲದೆ 9 ದಿನ ಗುಹೆಯಲ್ಲಿ ಸಿಲುಕಿದ್ದ 12 ಬಾಲಕರು, ಫುಟ್ಬಾಲ್ ಕೋಚ್ ಪತ್ತೆ!

Pinterest LinkedIn Tumblr

ಚಿಯಾಂಗ್ ರಾಯ್(ಥಾಯ್ಲೆಂಡ್): ಪ್ರವಾಹ ಸೃಷ್ಟಿಯಾಗಿ ಸುಮಾರು 9 ದಿನಗಳ ಕಾಲ ಗುಹೆಯಲ್ಲಿ ಸಿಲುಕಿದ್ದ 12 ಫುಟ್ಬಾಲ್ ಆಟಗಾರರು ಮತ್ತು ತಂಡದ ಕೋಚ್ ಜೀವಂತವಾಗಿದ್ದಾರೆ.

https://youtu.be/IqDtXc7Cc64

ಕೋಚ್ ಸಮೇತ ಬಾಲಕರು ಸುತ್ತಾಡಲು ಹೋದಾಗ ಈ ಅವಘಡ ಸಂಭವಿಸಿತ್ತು. ಗುಹೆಯೊಳಗೆ ಇದ್ದಾಗ ಪ್ರವಾಹದಿಂದ 13 ಮಂದಿ ಕೊಚ್ಚಿ ಹೋಗಿದ್ದರು. ನಂತರ ಪುಟ್ಟಾಯ್ ಬೀಚ್ ಬಳಿ ಸಿಲುಕಿದ್ದರು. 9 ದಿನಗಳಿಂದ ಎಲ್ಲರೂ ಒಟ್ಟಾಗಿ ಅಲಿಯೇ ಇದ್ದಾರೆ.

25 ವರ್ಷದ ಕೋಚ್ ಜೊತೆ 12 ಬಾಲಕರು ನಿಗೂಢವಾಗಿ ಕಾಣೆಯಾದ ಬಗ್ಗೆ ಆತಂಕ ಸೃಷ್ಟಿಯಾಗಿದ್ದು ನಂತರ ಶೋಧ ಕಾರ್ಯಕ್ಕೆ ಬ್ರಿಟಿಷ್ ಗುಹಾ-ಮುಳುಗುತಜ್ಞರಾದ ಜಾನ್ ವೊಲಾಂಥೇನ್ ಮತ್ತು ರಿಕ್ ಸ್ಟಾಂಟನ್ ಮುಂದಾಗಿದ್ದರು.

ಇದೀಗ ಬಾಲಕರು ಇರುವ ಜಾಗವನ್ನು ಪತ್ತೆ ಮಾಡಲಾಗಿದ್ದು ಬಾಲಕರ ರಕ್ಷಣೆಗೆ ಪೊಲೀಸರು, ರಕ್ಷಣಾದಳ ಹಾಗೂ ಥಾಯ್ ನೇವಿ ತಜ್ಞರು ತೊಡಗಿದ್ದಾರೆ. ಇನ್ನು ಗುಹೆಯಲ್ಲಿ ನೀರಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮೊದಲು ನೀರು ಖಾಲಿ ಮಾಡಿದ ನಂತರ ಬಾಲಕರನ್ನು ರಕ್ಷಣೆ ಮಾಡಲಾಗುತ್ತದೆ.

ಅಲ್ಲಿಯವರೆಗೂ ಗುಹೆಯಲ್ಲಿ ಆಕ್ಸಿಜನ್, ಆಹಾರವನ್ನು ಪೂರೈಸಲಾಗುತ್ತಿದೆ. ಬಾಲಕರು ಪತ್ತೆಯಾದ ವಿಡಿಯೋವನ್ನು ಥಾಯ್ ಸರ್ಕಾರ ಬಿಡುಗಡೆ ಮಾಡಿದೆ.

Comments are closed.