ಮನೋರಂಜನೆ

ಕಾರಿನಿಂದ ಕಸ ಬಿಸಾಡಿದವನಿಗೆ ನಟಿ ಅನುಷ್ಕಾ ಏನು ಮಾಡಿದ್ರು ಗೊತ್ತೇ…?

Pinterest LinkedIn Tumblr

ಮುಂಬೈ: ಐಷಾರಾಮಿ ಕಾರಿನಲ್ಲಿ ಹೋಗುತ್ತ ರಸ್ತೆಯಲ್ಲಿ ಕಸ ಬಿಸಾಡಿದ ವ್ಯಕ್ತಿಯೊಬ್ಬರನ್ನು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ತರಾಟೆಗೆ ತೆಗೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನಲ್ಲಿ ಪತಿ ಕೊಹ್ಲಿಯೊಂದಿಗೆ ನಟಿ ಅನುಷ್ಕಾ ಶರ್ಮಾ ತೆರಳುತ್ತಿದ್ದಾಗ ಐಷಾರಾಮಿ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿ ಕಸ ಬಿಸಾಡಿದ್ದಾರೆ. ಇದನ್ನು ಗಮನಿಸಿದ ಅನುಷ್ಕಾ ತಮ್ಮ ಕಾರಿನ ಗಾಜು ಇಳಿಸಿ, ಆತನ ವಿರುದ್ಧ ಗರಂ ಆಗಿದ್ದಾರೆ. ‘ರಸ್ತೆಯ ಮೇಲೇಕೆ ಕಸ ಬಿಸಾಡುತ್ತಿದ್ದೀರಿ?, ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್‌ ಎಸೆಯುವಂತಿಲ್ಲ. ದಯವಿಟ್ಟು ಕಾಳಜಿ ವಹಿಸಿ’ ಎಂದು ಸ್ವಚ್ಛತೆಯ ಪಾಠ ಮಾಡಿದ್ದಾರೆ.

ಪತ್ನಿಯ ಈ ಸ್ವಚ್ಛತಾ ಪಾಠದ ಸನ್ನಿವೇಶವನ್ನು ಪತಿ ಹಾಗೂ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಅದನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ವಿಡಿಯೋ ಕುರಿತು ‘ರಸ್ತೆಯಲ್ಲಿ ಈ ರೀತಿ ಕಸ ಹಾಕುವ ಜನರನ್ನು ಸರಿದಾರಿಗೆ ತರಬೇಕಿದೆ. ಐಷಾರಾಮಿ ಕಾರಿನಲ್ಲಿ ಹೋಗುತ್ತಿದ್ದರೂ ಸ್ವಚ್ಛತೆ ಬಗ್ಗೆ ತಲೆಯಲ್ಲಿ ತಿಳಿವಳಿಕೆ ಇಲ್ಲ. ಇಂತಹ ಸನ್ನಿವೇಶಗಳನ್ನು ನೀವೂ ಕಂಡರೇ, ಜನರನ್ನು ಎಚ್ಚರಿಸಿ ಸ್ವಚ್ಛತೆಯ ಅರಿವು ಮೂಡಿಸಿ’ ಎಂದು ವಿರಾಟ್‌ ಸಲಹೆ ನೀಡಿದ್ದಾರೆ.

Comments are closed.