ಕರ್ನಾಟಕ

ಕೊಹ್ಲಿಯ ಸವಾಲು ಸ್ವೀಕರಿಸಿದ ಮೋದಿ ! ಕರ್ನಾಟಕದ ಯಾರಿಗೆ ಪ್ರತಿ ಸವಾಲು ಹಾಕಿದ್ದು ಗೊತ್ತಾ?

Pinterest LinkedIn Tumblr

ನವದೆಹಲಿ: ಬಹಳ ದಿನಗಳ ಬಳಿಕ ಪ್ರಧಾನಿ ಮೋದಿ ಫಿಟ್ನೆಸ್ ಸವಾಲು ಸ್ವೀಕರಿಸಿದ್ದು, ಅಲ್ಲದೆ ಕರ್ನಾಟಕ ರಾಜ್ಯದ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ.

ಬುಧವಾರ ಬೆಳಗ್ಗೆ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ತಮ್ಮ ಯೋಗಾಭ್ಯಾಸದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಸುಮಾರು 2 ನಿಮಿಷದ ವಿಡಿಯೋದಲ್ಲಿ ಪ್ರಧಾನಿ ಮೋದಿ ವಿವಿಧ ಯೋಗದ ಭಂಗಿಗಳನ್ನು ತೋರಿಸಿದ್ದಾರೆ. ಪ್ರಮುಖವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಯೋಗಾಭ್ಯಾಸಗಳನ್ನು ನಾನು ನಿತ್ಯ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ಯೋಗಾಭ್ಯಾಸವಲ್ಲದೇ ನಾನು ನಿತ್ಯ ಒಂದಷ್ಟು ಸಮಯ ವಾಕ್ ಮಾಡುತ್ತೇನೆ. ಇದು ನನ್ನನ್ನು ದಿನಪೂರ್ತಿ ಚುಟವಟಿಕೆಯಿಂದ ಇರುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಬಳಿಕ ಪ್ರಧಾನಿ ಮೋದಿ ತಮ್ಮ ಫಿಟ್ನೆಸ್ ಸವಾಲಿಗೆ ಟೆಬಲ್ ಟೆನ್ನಿಸ್ ಆಟಗಾರರಾದ ಮಾನಿಕ್ ಬಾತ್ರಾ, ಕರ್ನಾಟಕ ಸಿಎಂ ಎಚ್ ಡಿ ಕುಮಾರಸ್ವಾಮಿ, ಭಾರತದ ಸಮಸ್ತ ಪೊಲೀಸ್ ಅಧಿಕಾರಿಗಳು ಪ್ರಮುಖವಾಗಿ 40 ವರ್ಷ ಮೀರಿದ ಅಧಿಕಾರಿಗಳನ್ನು ಫಿಟ್ನೆಸ್ ಸವಾಲು ನೀಡಿದ್ದಾರೆ.

ಕೇಂದ್ರದ ಯುವಜನ ಮತ್ತು ಕ್ರೀಡಾಭಿವೃದ್ಧಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಈ ಫಿಟ್ನೆಸ್ ಸವಾಲು ಅಭಿಯಾನವನ್ನು ಆರಂಭಿಸಿದ್ದರು.

Comments are closed.