ಅಂತರಾಷ್ಟ್ರೀಯ

ರೂಮಿನಲ್ಲಿ ಮಲಗಬೇಡ ಎಂದಿದ್ದಕ್ಕೆ ಈ 12 ವರ್ಷದ ಬಾಲಕ ಮಲಗಿದ್ದೆಲ್ಲಿ…? ನೀವು ನೋಡಿದ್ರೆ ಶಾಕ್ ಆಗ್ತೀರಿ…!

Pinterest LinkedIn Tumblr

ಬೀಜಿಂಗ್: ರೂಮಿನಲ್ಲಿ ಮಲಗಬೇಡ ಎಂದಿದ್ದಕ್ಕೆ 12 ವರ್ಷದ ಬಾಲಕನೊಬ್ಬ 5ನೇ ಮಹಡಿಯ ಕಿಟಕಿಯ ಲೇಡ್ಜ್ ಮೇಲೆ ಮಲಗಿದ ಘಟನೆ ಚೀನಾದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

https://www.facebook.com/pearvideocn/videos/1025417874283562/?t=2

ಬಾಲಕ ರೂಮಿನಲ್ಲಿ ಮಲಗಿದ ಮೇಲೆ ಹಾಸಿಗೆಯಿಂದ ಎದ್ದು ಬರಲು ಸೋಮಾರಿ ಆಗುತ್ತಿದ್ದನು. ಇದನ್ನು ನೋಡಿ ಕೋಪಗೊಂಡ ಆತನ ತಂದೆ ಬಾಲಕನಿಗೆ ರೂಮಿನಲ್ಲಿ ಮಲಗಬೇಡ ಎಂದು ಆತನನ್ನು ಬೈದಿದ್ದಾರೆ.

ತಂದೆ ಬೈದಿದ್ದರಿಂದ ಕೋಪಗೊಂಡ ಬಾಲಕ ಕಿಟಕಿಯ ಮೇಲೆ ಮಲಗಲು ನಿರ್ಧರಿಸಿದ್ದನು. ನಂತರ ಹಾಸಿಗೆ ಮೇಲೆ ಹತ್ತಿ, ತನ್ನ ಎರಡೂ ಕೈಗಳನ್ನು ಕಟ್ಟಿಕೊಂಡು ಕಿಟಕಿ ಮೇಲೆ ಮಲಗಿದ್ದಾನೆ. ಹೀಗೆ ಮಲಗಿದ ಬಾಲಕನನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಬಂದರು ಎಂದು ಹೇಳಲಾಗಿದೆ.

ಸದ್ಯ ಬಾಲಕ 5ನೇ ಮಹಡಿಯ ಕಿಟಕಿ ಮೇಲೆ ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕ ಸಿಟ್ಟಿನಿಂದ ಕಿಟಕಿಯ ಮೇಲೆ ಮಲಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Comments are closed.