ಅಂತರಾಷ್ಟ್ರೀಯ

ಅತ್ಯಾಚಾರ ಅತಿ ದುಃಖದ ಸಂಗತಿ…ಅತ್ಯಾಚಾರವನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ: ಲಂಡನ್ನಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮೋದಿ

Pinterest LinkedIn Tumblr

ಲಂಡನ್: ಚಹಾ ಮಾರುತ್ತಿದ್ದ ಒಬ್ಬ ವ್ಯಕ್ತಿ ಪ್ರಧಾನಿಯಾಗಬಹುದು ಎಂಬುದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಆ ವ್ಯಕ್ತಿ ₹125 ಕೋಟಿ ಭಾರತೀಯರ ಸೇವಕನಾಗಿ ರಾಯಲ್ ಪ್ಯಾಲೇಸ್‍ನಲ್ಲಿ ಕುಳಿತಿದ್ದಾರೆ. ಲಂಡನ್‍ನ ವೆಸ್ಟ್ ಮಿನಿಸ್ಟರ್ ಸೆಂಟ್ರಲ್ ಹಾಲ್‍ನಲ್ಲಿ ಭಾರತ್ ಕೀ ಬಾತ್, ಸಬ್ ಕೇ ಸಾಥ್ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತುಗಳಿವು.

ಸರ್ಕಾರ ಎಲ್ಲವನ್ನೂ ಮಾಡಬೇಕು ಎಂದು ಜನರು ಬಯಸುತ್ತಾರೆ. ಆದರೆ ಅಭಿವೃದ್ದಿ ಕಾರ್ಯಗಳಲ್ಲಿ ಜನರೂ ಭಾಗಿಯಾಗಬೇಕಿದೆ. ಜನರ ಭಾಗವಹಿಸುವಿಕೆ ಪ್ರಜಾಪ್ರಭುತ್ವದಲ್ಲಿ ಉತ್ತಮ ಅಧಿಕಾರವನ್ನು ನಡೆಸುವಂತೆ ಮಾಡುತ್ತದೆ. 1857 ರಿಂದ ಭಾರತದಲ್ಲಿ ಸ್ವಾತಂತ್ರ ಹೋರಾಟ ನಡೆದುಬಂದಿತ್ತು. ಆದರೆ ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ನಂತಕ ಜನರು ಒಗ್ಗಟ್ಟಾದರು.ಅದು ಜನಪರ ಹೋರಾಟವಾಯಿತು. ಅದೇ ರೀತಿ ಅಭಿವೃದ್ಧಿ ಎಂಬುದು ಜನಪರ ಹೋರಾಟದ ಭಾಗವಾಗಿದೆ.

ರೈಲ್ವೆ ನಿಲ್ದಾಣದಿಂದ ಅರಮನೆಗೆ ತಲುಪಿದರು ಎಂದು ಹೇಳುವುದು ಸುಲಭ. ಆದರೆ ಆ ಪಯಣ ಕಷ್ಟಕರವಾಗಿತ್ತು. ರೈಲ್ವೆ ನಿಲ್ದಾಣದಲ್ಲಿನ ಚಹಾ ಮಾರುವ ಬದುಕು ಹಲವಾರು ವಿಷಯಗಳನ್ನು ಕಲಿಸಿತು. ಜನರು ಮನಸ್ಸು ಮಾಡಿದರೆ ಒಬ್ಬ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಬಹುದು ಎಂದು ಮೋದಿ ಹೇಳಿದ್ದಾರೆ.

ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡಿದ ಮೋದಿ, ಅತ್ಯಾಚಾರ ಎಂದರೆ ಅತ್ಯಾಚಾರ ಅಷ್ಟೇ. ಈ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳು ನಡೆದವು.ಹಿಂದಿನ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳು ನಡೆಯಿತು ಎಂಬುದರ ಬಗ್ಗೆ ಹೋಲಿಕೆ ಮಾಡಲು ನಾನು ಇಚ್ಛಿಸುವುದಿಲ್ಲ. ಅತ್ಯಾಚಾರ ಅತಿ ದುಃಖದ ಸಂಗತಿ. ಅತ್ಯಾಚಾರವನ್ನು ರಾಜಕೀಯ ವಿಷಯವನ್ನಾಗಿ ಮಾಡಬಾರದು ಎಂದಿದ್ದಾರೆ.

ಸಂವಾದ ಕಾರ್ಯಕ್ರಮದ ಸಭೆಯಲ್ಲಿ ಉಪಸ್ಥಿತರಿದ್ದ ವಾಕ್ ವೈಕಲ್ಯವಿರುವ ಹಿರಿಯ ವ್ಯಕ್ತಿಯೊಬ್ಬರು ಭಾರತ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಪ್ರಶ್ನೆ ಕೇಳಿದಾಗ, ಭಯೋತ್ಪಾದನೆಯನ್ನು ಆಮದು ಮಾಡುತ್ತಿರುವ ವ್ಯಕ್ತಿಗಳಿಗೆ ನಾನೊಂದು ಮಾತು ಹೇಳಲು ಇಚ್ಛಿಸುತ್ತೇನೆ. ಅದೇನೆಂದರೆ ಭಾರತ ಬದಲಾಗಿದೆ ಮತ್ತು ಅವರ ಮಂಗಾಟವನ್ನು ನಾವು ಸಹಿಸುವುದಿಲ್ಲ. ನಾವು ಶಾಂತಿಯಲ್ಲಿ ನಂಬಿಕೆಯುಳ್ಳವರು. ಆದರೆ ನಾವು ಭಯೋತ್ಪಾದನೆಯನ್ನು ಸಹಿಸಿಕೊಳ್ಳುವುದಿಲ್ಲ.ಅವರಿಗೆ ಅರ್ಥವಾಗುವ ಭಾಷೆಯಲ್ಲಿಯೇ ನಾವು ತಿರುಗೇಟು ನೀಡುತ್ತೇವೆ. ಭಯೋತ್ಪಾದನೆಯನ್ನು ನಾವು ಎಂದೂ ಒಪ್ಪುವುದಿಲ್ಲ.

ಏತನ್ಮಧ್ಯೆ, ಪಾಕಿಸ್ತಾನದ ಮೇಲೆ ನಡೆದ ನಿರ್ದಿಷ್ಟ ದಾಳಿ ಬಗ್ಗೆ ವಿವರಿಸಿದ ಮೋದಿ, ನಿರ್ದಿಷ್ಟ ದಾಳಿ ನಡೆಸುತ್ತಿರುವ ವಿಷಯ ಭಾರತಕ್ಕೆ ಗೊತ್ತಾಗುವ ಮುನ್ನ ಪಾಕಿಸ್ತಾನದವರಿಗೆ ತಿಳಿಸಬೇಕು.ಎಂದು ನಾನು ಹೇಳಿದ್ದೆ. ಹಾಗಾಗಿ ನಾವು ಬೆಳಗ್ಗೆ 11 ಗಂಟೆಯಿಂದ ಅವರಿಗೆ ಫೋನ್ ಮಾಡುತ್ತಿದ್ದರೆ ಕರೆ ಸ್ವೀಕರಿಸಲು ಅವರು ಅಂಜುತ್ತಿದ್ದರು. 12 ಗಂಟೆಗೆ ನಾವು ಅವರೊಂದಿಗೆ ಮಾತನಾಡಿದ ನಂತರ ಭಾರತದ ಮಾಧ್ಯಮಗಳಿಗೆ ಸುದ್ದಿ ತಿಳಿಸಿದ್ದೆವು ಎಂದು ಹೇಳಿದ್ದಾರೆ.

Comments are closed.