ಮನೋರಂಜನೆ

ಕಾವೇರಿ ವಿವಾದಕ್ಕೆ ಸಂಬಂಧಿಸಿ ತಮಿಳಿಗರ ಹೋರಾಟದ ನಡುವೆ ಕರ್ನಾಟಕದ ಪರವಾಗಿ ಮಾತನಾಡಿ ಕನ್ನಡಿಗರ ಮನಗೆದ್ದ ಸಿಂಬು !

Pinterest LinkedIn Tumblr

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ತಮಿಳುನಾಡಿನಲ್ಲಿ ಹೋರಟಗಳು ನಡೆಯುತ್ತಿದ್ದು ಈ ಮಧ್ಯೆ ತಮಿಳು ನಟ ಸಿಂಬು ಅವರು ಕರ್ನಾಟಕದ ಪರವಾಗಿ ಮಾತನಾಡಿ ಕನ್ನಡಿಗರ ಮನಗೆದ್ದಿದ್ದಾರೆ.

https://youtu.be/WxQPNHHHecY

ಕಾವೇರಿ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನ ರೈತರು ನಡೆಸಿರುವ ಪ್ರತಿಭಟನೆ ಹೋರಾಟಕ್ಕೆ ತಮಿಳುನಾಡಿನಲ್ಲಿ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ಇದರ ಜತೆಗೆ ತಮಿಳು ಚಿತ್ರರಂಗ ಕೂಡ ಕೈಜೋಡಿಸಿದೆ.

ಈ ಬಗ್ಗೆ ಸಿಂಬು ಮಾಡಿರುವ ಭಾಷಣದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಸುತ್ತಿವೆ. ಕಾವೇರಿ ವಿವಾದ ಮುಂದಿಟ್ಟುಕೊಂಡು ಇಷ್ಟು ದಿನ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದು ಸಾಕು ಇನ್ನು ಮುಂದಾದರು ಕಾವೇರಿ ವಿವಾದವನ್ನು ತೆಗೆದುಕೊಂಡು ಕನ್ನಡಿಗರ ಜತೆ ಜಗಳ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.

ಕರ್ನಾಟಕದವರು ಎಂದಿಗೂ ನೀರು ಬಿಡುವುದಿಲ್ಲ ಎಂದು ಹೇಳಿಲ್ಲ. ವಿನಾಃ ಕಾರಣ ನಾವೇ ಅವರು ನೀರು ಬಿಡುತ್ತಿಲ್ಲ ಎಂದು ಜಗಳ ಮಾಡುತ್ತಿದ್ದೇವೆ. ಈ ಹಿಂದಿನ ಆದೇಶದಂತೆ ಕರ್ನಾಟಕ ತಮಿಳುನಾಡಿಗೆ ನೀರು ಹರಿಸುತ್ತಾ ಬಂದಿದೆ ಎಂದರು.

Comments are closed.