ಕರ್ನಾಟಕ

ಲಿಂಗ ಪರಿವರ್ತನೆ ಮಾಡಿಕೊಂಡು ಸುದ್ದಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಏಕೈಕ ಪುತ್ರ! ವಿಡಿಯೋ ವೈರಲ್

Pinterest LinkedIn Tumblr

https://youtu.be/IvjipmqOVIk

ತುಮಕೂರು: ನಮ್ಮಲ್ಲಿ ರಾಜಕಾರಣಿಗಳ ಮಕ್ಕಳು ಅಂದ್ರೆ ಒಂದು ಗಲಾಟೆಗಳ ಮೂಲಕ ಸುದ್ದಿಯಾಗಬೇಕು ಇಲ್ಲ, ಇನ್ನೊಂದು ಸಾಮಾಜಿಕ ಕೆಲಸಗಳ ಮೂಲಕ ಸುದ್ದಿಯಾಗ ಬೇಕು ಆದ್ರೆ ಇವರೆಡನ್ನು ಮೀರಿದ್ದ ಕಾರಣಕ್ಕೆ ರಾಜ್ಯದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮಗ ಸುದ್ದಿಯಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಪುತ್ರ ಸೀನ್ ತಮ್ಮ ಲಿಂಗ ಬದಲಾಯಿಸಿಕೊಂಡು ಶನಾ ಆಗಿ ಬದಲಾಗಿದ್ದಾರೆ. ಈ ಬಗ್ಗೆ ಖಾಸಗಿ ಆನ್ ಲೈನ್ ಪತ್ರಿಕೆಯೊಂದು ವರದಿ ಮಾಡಿದೆ.

ಕೆಲ ತಿಂಗಳ ಹಿಂದೆ ಸೀನ್ ಪರಮೇಶ್ವರ್ ವಿದೇಶದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ತಮ್ಮ ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ಅವರು ಶನಾ ಅಂತ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಫಾಲೋವರ್ಸ್ ಗಳಿಂದ ಶನಾಗೆ ಅಭಿನಂದನೆಗಳೂ ಮಹಾಪೂರವೇ ಹರಿದು ಬಂದಿದೆ, ಈ ಕೆಲಸ ಮಾಡು ಧೈರ್ಯ ಬೇಕು, ಜೊತೆಗೆ ಅವರಿಗೆ ನಾವೆಲ್ಲರೂ ಸಹಾಯ ಮಾಡಬೇಕು ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಜಿ ಪರಮೇಶ್ವರ್ ಅವರು ಸ್ಪರ್ಧಿಸುವ ಕೊರಟಗೆರೆ ಕ್ಷೇತ್ರದ ಜನತೆಗೆ ಈ ವಿಷಯ ತಿಳಿದು ಆಘಾತ ವ್ಯಕ್ತ ಪಡಿಸಿದ್ದಾರೆ, ನಾನು ನನ್ನ ಜೀವನವನ್ನು ನೊಂದ ಮಹಿಳೆಯರ ಏಳಿಗೆಗಾಗಿ ಶ್ರಮಿಸಲು ಮುಡಿಪಾಗಿಡುವುದಾಗಿ ತಿಳಿಸಿದ್ದಾರೆ, ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಪ್ರಪಂಚದಲ್ಲಿ ಅತ್ಯಾಚಾರ, ಯುದ್ಧ ದೌರ್ಜನ್ಯಕ್ಕೊಳಗಾದ ಮಹಿಳೆಯರ ಪರವಾಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ನನ್ನ ಜೀವನವನ್ನು ಸೆಟ್ ಅಪ್ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ, ಧ್ವನಿಯಿಲ್ಲದವರ ಪರವಾಗಿ ಒಂಟಿಯಾಗಿ ನಿಲ್ಲಬೇಕಿದೆ ಎಂದು ಹೇಳಿರುವ ಅವರು, ಯಾವುದೇ ಕಾರಣಕ್ಕೂ ಭಾರತಕ್ಕೆ ವಾಪಸ್ ಬರುವುದಿಲ್ಲ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

Comments are closed.