ಕರಾವಳಿ

ಕೇಂದ್ರ ಸಚಿವ ಅನಂತಕುಮಾರ್ ಇದ್ದ ಪ್ರವಾಸಿ ಮಂದಿರಕ್ಕೆ ಸಚಿವ ಪ್ರಮೋದ್ ಹೋಗಿದ್ದ್ಯಾಕೆ ಗೊತ್ತಾ? (Video)

Pinterest LinkedIn Tumblr

ಉಡುಪಿ: ಉಡುಪಿಯ ಪ್ರಭಾವಿ ರಾಜಕಾರಣಿ ಹಾಗೂ ಹಾಲಿ ಸಚಿವರೋರ್ವರು ಬಿಜೆಪಿ ಸೇರುವ ಬಗ್ಗೆ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಸಚಿವರು ಕೇಂದ್ರದ ಬಿಜೆಪಿ ನಾಯಕರೊಂದಿಗೆ ಕೂತು ಮಾತನಾಡಿರೋದು. ಇದೀಗ ಸಮಾಜಿಕ ಜಾಲ ತಾಣಗಳಲ್ಲಿ ಇವರದ್ದೇ ಚರ್ಚೆ. ಆದರೇ ಅವರು ಆ ಭೇಟಿ ಕುರಿತು ತಾನು ಅಲ್ಲಿಗೆ ಹೋದ ಕಾರಣವೇನೆಂಬ ಕುರಿತು ಹೇಳೀದ್ದಾರೆ.

ಪ್ರಮೋದ್ ಮಧ್ವರಾಜ್ ಮೀನುಗಾರ ಸಮುದಾಯದ ಮುಖಂಡ. ಕಳೆದ ಚುನಾವಣೆಯಲ್ಲಿ  40 ಸಾವಿರಕ್ಕೂ ಅಧಿಕ ಮತಗಳನ್ನು ಗೆದ್ದು ಉಡುಪಿ ವಿಧಾನಸಭಾ ಕ್ಷೆತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದವರು. ಕಾಂಗ್ರೆಸ್ ನಿಂದ ಆಯ್ಕೆ ಆದ ಇವರು ಇದೀಗ ಸಿದ್ಧರಾಮಯ್ಯ ಸರ್ಕಾರದಲ್ಲಿ ಮೀನುಗಾರಿಕಾ, ಕ್ರೀಡಾ ಸಚಿವರು. ಸದ್ಯಕ್ಕೆ ಉಡುಪಿಯಲ್ಲಿ ಪವರ್ ಫುಲ್ ರಾಜಕಾರಣಿಯಾಗಿ ಬೆಳೆಯುತ್ತಿರುವ ಪ್ರಮೋದ್ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ. ಆದ್ರೆ ಪ್ರಮೋದ್ ಬಿಜೆಪಿ ಸೇರ್ತಾರೆ ಎಂಬುದೇ ಇದೀಗ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆ. ಇದಕ್ಕೆ ಕಾರಣ ಕೇಂದ್ರದ ಬಿಜೆಪಿ ನಾಯಕರೊಂದಿಗೆ ಆತ್ಮೀಯವಾಗಿ ಪ್ರಮೋದ್ ಕೂತು ಮಾತನಾಡಿರೋದು. ಹೌದು. ಉಡುಪಿಯಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಸೇರಿದಂತೆ ರಾಜ್ಯದ ಬಿಜೆಪಿ ನಾಯಕ ಅನಂತ್ ಕುಮಾರ್ , ಶೋಭಾಕರಂದ್ಲಾಜೆ ಭಾಗವಹಿಸಿದ್ದರು. ಉಡುಪಿಯ ಪ್ರವಾಸಿ ಮಂದಿರದಲ್ಲಿ ಬಿಜೆಪಿ ನಾಯಕರೊಂದಿಗೆ ಸಚಿವ ಪ್ರಮೋದ್ ಕೂತು ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿದ್ದು ಪ್ರಮೋದ್ ಬಿಜೆಪಿ ಸೇರುವ ಗುಸುಗುಸು ಆರಂಭವಾಗಿದೆ.

ಅಂದ ಹಾಗೆ ಪ್ರಮೋದ್ ಬಿಜೆಪಿ ಸೇರುವ ವದಂತಿ ಹಬ್ಬಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಒಂದೆರಡು ಬಾರಿ ಈ ರೀತಿಯ ವದಂತಿ ಹಬ್ಬಿತ್ತು. ಇದನ್ನು ಪ್ರಮೋದ್ ಸಾರಾ ಸಗಾಟವಾಗಿ ತಳ್ಳಿ ಹಾಕಿದ್ದರು. ಈ ಬಾರಿಯೂ ಬಿಜೆಪಿ ಸೇರುವ ಇರಾದೆಯೇ ಇಲ್ಲ ಎಂಬ ಬಗ್ಗೆ ಸ್ವತ: ಪ್ರಮೋದ್ ಮದ್ವರಾಜ್ ಹೇಳಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾನು ಶೌಚಾಲಯಕ್ಕೆ ಹೋಗುವ ಸಲುವಾಗಿ ಪ್ರವಾಸಿ ಮಂದಿರಕ್ಕೆ ತೆರಳಿದ್ದೆ. ಈ ವೇಳೆ ಕೇಂದ್ರ ಸಚಿವರಿದ್ದರು. ಅವರನ್ನು ಮಾತನಾಡಿಸದಿದ್ದರೂ ಇನ್ನೊಂದು ರೀತಿ ಸುದ್ದಿಯಾಗೋದು ಖಚಿತ. ಅದಕ್ಕಾಗಿಯೇ ಕುಶಲೋಪರಿ ಮಾತಾಡಿಸಿರುವೆ. ನನಗ್ಯಾರು ಗಾಳ ಹಾಕುತ್ತಿಲ್ಲ ಎಂದಿದ್ದಾರೆ. (ಮಧ್ವರಾಜ್ ಇನ್ನಷ್ಟು ಮಾತುಗಳು ವೈರಲ್ ಆದ ವಿಡಿಯೋದಲ್ಲಿ)

ಒಟ್ಟಿನಲ್ಲಿ ಪ್ರಮೋದ್ ಮದ್ವರಾಜ್ ಮತ್ತೆ ಸುದ್ದಿಯಲಿದ್ದಾರೆ. ಬಿಜೆಪಿ ಸೇರುತ್ತಾರಾ ಅಥವಾ ಕಾಂಗ್ರೆಸ್ ನಲ್ಲಿಯೇ ಇರುತ್ತಾರಾ ಎಂಬುದು ಮಾತ್ರ ಮುಂದಿನ ಚುನಾವಣೆ ನಿರ್ದರಿಸಲಿದೆ. ಅಲ್ಲಿ ತನಕ ಕಾದು ನೋಡಬೇಕಿದೆ.

Comments are closed.