ಕ್ರೀಡೆ

ಹುಟ್ಟುಹಬ್ಬದಂದೇ ಅನಿಲ್ ಕುಂಬ್ಳೆಗೆ ಅವಮಾನ ಮಾಡಿದ ಬಿಸಿಸಿಐ

Pinterest LinkedIn Tumblr

ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ಹಾಗೂ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರನ್ನು ಬರಿ ಮಾಜಿ ಬೌಲರ್ ಎಂದು ಬಿಂಬಿಸುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬರ್ತ್ ಡೇ ಬಾಯ್ ಗೆ ಅವಮಾನ ಮಾಡಿದೆ ಎಂದು ಹಲವು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ವಿಶ್ವಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ ಅವರ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅವರಿಗೆ ಹುಟ್ಟು ಹಬ್ಬ ಶುಭಾಶಯಗಳನ್ನು ಕೋರಿದೆ. ಆದರೆ ಆ ಶುಭಾಶಯದಲ್ಲಿ ಬರಿ ಮಾಜಿ ಬೌಲರ್ ಎಂದು ಹೇಳುವ ಮೂಲಕ ಅವಮಾನವೆಸಗಿದೆ. ಈ ಸಂಬಂಧ ಹಲವು ಅಭಿಮಾನಿಗಳು ಬಿಸಿಸಿಐ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ ತನ್ನ ಟ್ವಿಟರ್ ಪೋಸ್ಟ್ ತೆಗೆದು ಹಾಕಿ ಹೊಸ ಪೋಸ್ಟ್ ಹಾಕಿತ್ತು. ಆದರೂ ಅನಿಲ್ ಕುಂಬ್ಳೆ ಸಾಧನೆಗಳನ್ನು ಕಿರುದಾಗಿ ಕಾಣುವ ಯತ್ನ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣಾಗಿದೆ.

ಆದರೆ ದೊಡ್ಡತನ ಮೆರೆದಿರುವ ಕುಂಬ್ಳೆ ಬಿಸಿಸಿಐಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. 17 ವರ್ಷಗಳ ಕಾಲ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಕುಂಬ್ಳೆ ತಾವು ಆಡಿರುವ 132 ಟೆಸ್ಟ್ ಪಂದ್ಯಗಳಲ್ಲಾಗಿ 619 ವಿಕೆಟ್‌ಗಳನ್ನು ಕಬಳಿಸಿದ್ದರು.

Comments are closed.