ಪ್ರಮುಖ ವರದಿಗಳು

ಬಿಗ್‌ಬಾಸ್ ಮನೆಯಲ್ಲಿ ಪ್ರಥಮ್ ಮೇಲೆ ಹುಚ್ಚ ವೆಂಕಟ್ ಮಾಡಿದ ಹಲ್ಲೆ ವೀಡಿಯೊ ವೈರಲ್….

Pinterest LinkedIn Tumblr

https://youtu.be/JPJINVgA7Aw

ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ಅತಿಥಿಯಾಗಿ ಹೋಗಿದ್ದ ಹುಚ್ಚ ವೆಂಕಟ್ ಅವರು ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದು, ಈ ವೀಡಿಯೊ ಈಗ ವೈರಲ್ ಆಗಿದೆ.

ಪ್ರಥಮ್’ಗೆ ಹೊಡೆಯಬೇಕೆಂದು ಮುಂಚೆಯೆ ಪ್ಲ್ಯಾನ್ ಮಾಡಿಕೊಂಡು ಹೋಗಿದ್ದೆ. ಈ ವಿಷಯವನ್ನು ಬಿಗ್’ಬಾಸ್ ಮೇಲ್ವಿಚಾರಕರಿಗೆ ತಿಳಿಸಿರಲಿಲ್ಲ ಎಂದು ಹುಚ್ಚ ವೆಂಕಟ್ ಸಮರ್ಥನೆ ನೀಡಿದ್ದಾರೆ. ಈ ಮೊದಲು ಹುಚ್ಚ ವೆಂಕಟ್ ಅವರು ಸೀಸನ್ 3ರಲ್ಲೂ ರವಿ ಮೂರೂರು ಅವರ ಮೇಲೂ ಕೈ ಮಾಡಿದ್ದರು. ಆಗಲು ಸುದ್ದಿಯಲ್ಲಿದ್ದ ಹುಚ್ಚ ವೆಂಕಟ್, ಬಿಗ್‌ಬಾಸ್ ಮನೆಯಲ್ಲಿ ಸದಸ್ಯರಿಗೆ ನೀಡಿದ್ದ ಟಾಸ್ಕ್ ವೇಳೆ ಎಂಟ್ರಿ ನೀಡಿ, ಬಾಡಿಗಾರ್ಡ್ ಇರುವಾಗಲೇ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದಾರೆ.

ಎಲ್ಲ ಸ್ಪರ್ಧಿಗಳೊಂದಿಗೂ ಕೆಲ ಹೊತ್ತು ಮಾತನಾಡಿದರು. ಆದರೆ ಮಾತನಾಡಬಾರದೆಂಬ ಟಾಸ್ಕ್ ನೀಡಿದ್ದ ಕಾರಣ ಸ್ಪರ್ಧಿಗಳ್ಯಾರು ವೆಂಕಟ್ ಜೊತೆ ಮಾತನಾಡಿರಲಿಲ್ಲ. ಕೊನೆಯದಾಗಿ ಸ್ಪರ್ಧಿ ಪ್ರಥಮ್ ಬಳಿ ಬಂದು ಮಾತನಾಡಿಸಿದ್ದಾರೆ. ಅವರು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಏಕಾಏಕಿ ಪ್ರಥಮ್’ಗೆ ಹೊಡೆದು ಎಳದಾಡಿದರು. ತಕ್ಷಣವೇ ಬೌನ್ಸರ್’ಗಳು ಅವರನ್ನು ಬಿಗ್’ಬಾಸ್ ಮನೆಯಿಂದ ಕರೆದುಕೊಂಡು ಹೋದರು.

ಬಿಗ್‌ಬಾಸ್ ಮನೆಯಲ್ಲಿ ಪ್ರಥಮ್ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ಯಾರು ಕೂಡ ಪ್ರಥಮ್ ಪರ ವಹಿಸಲಿಲ್ಲ. ಪ್ರಥಮ್ ಪ್ರಚೋದನೆ ನೀಡಿದ್ದರಿಂದಲೇ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದಾರೆ ಎಂಬುದು ಕೀರ್ತಿ-ನಿರಂಜನ್ ವಾದ. ಹೊಡೆತ ತಿಂದ ಪ್ರತಮ ಈಗ ಮನೆಯಲ್ಲಿ ಒಂಟಿ…ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.

Comments are closed.