ಪ್ರಮುಖ ವರದಿಗಳು

400 ಕೆಜಿ ತೂಕದ ದೈತ್ಯ ಗಾತ್ರದ ಅನಕೊಂಡ ಸೆರೆ ! ಈ ವೀಡಿಯೊ ನೋಡಿ…

Pinterest LinkedIn Tumblr

https://youtu.be/4oNzco_frbI

ಬ್ರೆಜಿಲಿಯಾ: ಜಗತ್ತಿನಲ್ಲಿ ಅತ್ಯಂತ ದೊಡ್ಡ ಹಾವು ಯಾವುದು ಎಂದರೆ ಎಲ್ಲರಿಗೂ ಮೊದಲು ಹೊಳೆಯುವ ಹೆಸರು ಅನಕೊಂಡಾ. ಅನಕೊಂಡಾ ಹಾವಿನ ತವರು ಎಂದು ಕರೆಸಿಕೊಳ್ಳುವ ಬ್ರೆಜಿಲ್ನಲ್ಲಿ ಇತ್ತೀಚೆಗೆ ದೈತ್ಯ ಗಾತ್ರದ ಅನಕೊಂಡಾ ಒಂದು ಪತ್ತೆಯಾಗಿದ್ದು, ಅದು ಇದುವರೆಗೂ ಪತ್ತೆಯಾಗಿರುವ ಅತಿ ದೊಡ್ಡ ಹಾವು ಎಂದು ಹೇಳಲಾಗುತ್ತಿದೆ. ಬ್ರೆಜಿಲ್‍ನಲ್ಲಿ ಕಟ್ಟಡ ನಿರ್ಮಾಣದ ಜಾಗದಲ್ಲಿ ಕಾಣಿಸಿಕೊಂಡ ದೈತ್ಯ ಅನಕೊಂಡವನ್ನು ಕಾರ್ಮಿಕರು ಸೆರೆಹಿಡಿದಿದ್ದಾರೆ.

33 ಅಡಿ ಉದ್ದದ ದೈತ್ಯ ಅನಕೊಂಡ ಹಾವನ್ನ ಉತ್ತರ ಬ್ರೆಜಿಲ್‍ನಲ್ಲಿ ಸೆರೆಹಿಡಿಯಲಾಗಿದೆ. ಹಾವು ಸುಮಾರು 400 ಕೆಜಿ ತೂಕವಿದ್ದು, ಎಷ್ಟು ದೈತ್ಯವಾಗಿತ್ತು ಎಂಬುದನ್ನು ವಿಡಿಯೋ ಹಾಗೂ ಫೋಟೋಗಳಲ್ಲಿ ನೋಡಬಹುದು.

ಇಲ್ಲಿನ ಅಲ್ಟಾಮಿರಾದಲ್ಲಿ ಬೆಲೊ ಮಾಂಟೆ ಡ್ಯಾಮ್ ನಿರ್ಮಾಣ ಮಾಡಲು ಗುಹೆಯೊಂದರಲ್ಲಿ ಸ್ಫೋಟಕಗಳನ್ನಿಟ್ಟು ಸ್ಫೋಟ ಮಾಡಿದ ಬಳಿಕ ಈ ದೈತ್ಯ ಹಾವು ಕಾಣಿಸಿಕೊಂಡಿದೆ. ಹಾವಿಗೆ ಸರಪಳಿ ಹಾಕಿ ಕ್ರೇನ್ ಮೂಲಕ ಮೇಲೆತ್ತಲಾಗಿದೆ.

ಈ ಹಾವನ್ನು ಕೊಂದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗಿದೆ. ಆದ್ರೆ ಕಾರ್ಮಿಕರೇ ಈ ಹಾವನ್ನು ಕೊಂದಿದ್ದಾರಾ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೆಲವರ ಪ್ರಕಾರ, ಸ್ಫೋಟವಾದಾಗಲೇ ಹಾವು ಸಾವನ್ನಪ್ಪಿದೆ ಅಂತ ಹೇಳಲಾಗಿದೆ.

ಅನಕೊಂಡಗಳು ಮನುಷ್ಯನನ್ನೂ ತಿನ್ನಬಹುದಾದಂತಹ ಹಾವುಗಳು. ಹಸಿರು ಅನಕೊಂಡಗಳು 16 ರಿಂದ 20 ಅಡಿಯಷ್ಟು ಉದ್ದ ಬೆಳೆಯುತ್ತವೆ. ವಿಶ್ವ ದಾಖಲೆಯ ಪುಟ ಸೇರಿರೋ ಜಗತ್ತಿನ ಅತೀ ಉದ್ದದ ಜೀವಂತ ಹಾವು ಮೆದುಸಾ 25.2 ಅಡಿ ಉದ್ದವಿದೆ.

Comments are closed.