https://youtu.be/FcWAocmMfuM
ನವದೆಹಲಿ: ದೀಪಿಕಾ ಪಡುಕೋಣೆ, ರಣ್’ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಛೋಪ್ರಾ ನಡಿಸಿದ್ದ ಬಾಲಿವುಡ್’ನ ‘ಬಾಜೀರಾವ್ ಮಸ್ತಾನಿ’ ಸಿನಿಮಾವನನ್ನು ವಿಶ್ವದಾದ್ಯಂತ ಪ್ರೇಕ್ಷಕರು ಇಷ್ಟಪಟ್ಟಿದ್ದರು ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಈ ಮಾತನ್ನು ಸಾಬೀತುಗೊಳಿಸುವಂತಹ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಮೆರಿಕಾದ ಪ್ರಖ್ಯಾತ ಡ್ಯಾನ್ಸ್ ರಿಯಾಲಿಟಿ ಶೋ ‘ಸೋ ಯು ಥಿಂಕ್ ಯು ಕ್ಯಾನ್ ಡ್ಯಾನ್ಸ್: ನೆಕ್ಸ್ಟ್ ಜನರೇಷನ್’ ನ ವಿಡಿಯೋ ಒಂದು ಬಿರುಸಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಹಬ್ಬಿಕೊಳ್ಳುತ್ತಿದೆ. ಈ ವಿಡಿಯೋದಲ್ಲಿ ಜೇಟಿ ಚರ್ಚ್ ಹೆಸರಿನ ಬಾಲಕನೊಬ್ಬ ತನ್ನ ಗುರು ಮಾರ್ಕೋ ಜರ್ಮರ್ ಇಬ್ಬರೂ ‘ಬಾಜೀರಾವ್ ಮಸ್ತಾನಿ’ ಸಿನಿಮಾದ ‘ಮಲ್ಹಾರಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಮೆರಿಕಾದ ಶೋ ಒಂದರಲ್ಲಿ ಹಿಂದಿ ಹಾಡಿಗೆ ನೃತ್ಯ ಮಾಡಿರುವುದು ಅಚ್ಚರಿಯೊಂದಿಗೆ ಹೆಮ್ಮೆಯ ವಿಚಾರವೇ ಸರಿ.
ಇನ್ನು ಈ ಬಾಲಕ ಈವರೆಗಿನ ಸ್ಪರ್ಧಾಳುಗಳಲ್ಲಿ ಅತಿ ಕಿರಿಯ ವಯಸ್ಸಿನವನಾಗಿದ್ದು, ಕೊನೆಯ ನಾಲ್ಕು ಸ್ಪರ್ಧಾಳುಗಳಲ್ಲಿ ಒಬ್ಬನಾಗಿದ್ದಾನೆ. ಈತನ ಈ ಡ್ಯಾನ್ಸ್ ತೀರ್ಪುಗಾರರಿಗೆ ಅದೆಷ್ಟು ಇಷ್ಟವಾಗಿತ್ತೆಂದರೆ ಎಲ್ಲರೂ ನಿಂತು ಚಪ್ಪಾಳೆ ತಟ್ಟಿದ್ದರು.
Comments are closed.