https://youtu.be/JSLNMgzPeMA
ಬೀಜಿಂಗ್: ಠಾಕು ಠೀಕಾಗಿ ಡ್ರೆಸ್ ಮಾಡಿದ್ದ ಆ ಅಂದಗಾತಿ ಯುವತಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ ಇದು. ಬಸ್ಸಿನ ಚಾಲಕ ಯಾವುದೋ ಕಾರಣಕ್ಕೆ ಆಕಸ್ಮಿಕವಾಗಿ ಮತ್ತು ಜೋರಾಗಿ ಬ್ರೇಕ್ ಒತ್ತಿದ. ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದ ಈಕೆ ಆಯತಪ್ಪಿ ಬಿದ್ದಿದ್ದಳು. ಆಗ ಆಕೆಯ ಕೈಚೀಲದಲ್ಲಿದ್ದ ಸೌಂದರ್ಯ ವರ್ಧಕ ಸಾಧನಗಳು ಕೂಡ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡವು !
ಯುವತಿ ಜಾರಿ ಬೀಳುವಾಗ ಆಧಾರಕ್ಕೆಂದು ತನ್ನ ಎದುರಲ್ಲೇ ನಿಂತಿದ್ದ ವ್ಯಕ್ತಿಯ ಶಾರ್ಟ್ಸ್ ಹಿಡಿದು ಜಗ್ಗಿದಳು. ಆಕೆ ಎಳೆದ ರಭಸಕ್ಕೆ ಆತನ ಚಡ್ಡಿ ಪೂರ್ತಿಯಾಗಿ ಜಾರಿತು. ಆತನಿಗೋ ತೀವ್ರ ಮುಜುಗರವಾಯಿತು. ನೋಡುವವರಿಗೆ ಕೂಡ ಹಾಗೆಯೇ ಆಯಿತು. ಕೂಡಲೇ ಆತ ಕೆಳಜಾರಿದ ಚಡ್ಡಿಯನ್ನು ಮೇಲೆತ್ತಿಕೊಂಡು ಅವಸರವಸರದಲ್ಲಿ ಧರಿಸಕೊಳ್ಳತೊಡಗಿದ.
ಆಗ ಜಾರಿ ಬಿದ್ದ ಹುಡುಗಿ ಸಾವರಿಸಿಕೊಂಡು ಮೇಲೆಳುವ ಭರದಲ್ಲಿ ಆಕೆಯ ತಲೆ – ಮುಖ ಆತನ ಸೂಕ್ಷ್ಮ ಪ್ರದೇಶಕ್ಕೆ ಢಿಕ್ಕಿ ಹೊಡೆಯಿತು. ಆತ ನೋವಿನಿಂದ ಚೀರಿದ !
ಬಸ್ಸಿನಲ್ಲಿದ್ದವರ ಪೈಕಿ ಯಾರೋ ಒಬ್ಬರು ಈ ಒಂದು ಮೋಜಿನ ಪ್ರಸಂಗವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲ ತಾಣಕ್ಕೆ ಅಪ್ ಲೋಡ್ ಮಾಡಿದರು.
ಅಂದ ಹಾಗೆ, ಲಘು ಪ್ರಹಸನದ, ಆದರೂ ‘ಸೂಕ್ಷ್ಮ ಸಂವೇದನೆ’ಯ ಈ ವಿಡಿಯೋ ಈಗ ಸಹಜವಾಗಿಯೇ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
-ಉದಯವಾಣಿ
Comments are closed.