ರಾಷ್ಟ್ರೀಯ

ಭೀಕರ ದೃಶ್ಯ: ಜಲಪಾತ ವೀಕ್ಷಣೆ ವೇಳೆ ಪ್ರವಾಹ, ಕೊಚ್ಚಿಹೋದ ಪ್ರವಾಸಿಗ

Pinterest LinkedIn Tumblr

ಭೋಪಾಲ್: ಮಳೆಗಾಲದಲ್ಲಿ ಜಲಪಾತಗಳು ತುಂಬಿ ಹರಿಯುತ್ತಿರುತ್ತವೆ. ಈ ವೇಳೆ ಜಲಪಾತದ ಮೇಲೆ ಹೋಗುವುದನ್ನ ನಿಷೇಧಿಸಿರಲಾಗುತ್ತದೆ. ಆದ್ರೆ ಮಧ್ಯಪ್ರದೇಶದಲ್ಲಿ ಜಲಪಾತದ ಮೇಲೆ ಹೋಗಿದ್ದಾಗ ಯುವಕನೋರ್ವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.

ಇಂತಹದೊಂದು ಘಟನೆ ಮಧ್ಯಪ್ರದೇಶದ ರೀವಾ ಜಿಲ್ಲೆಯಲ್ಲಿರುವ ಪೂರ್ವ ಜಲಪಾತದಲ್ಲಿ ನಡೆದಿದ್ದು, ಪಿಕ್‍ನಿಕ್‍ಗೆಂದು 15-16 ವರ್ಷದ ಐವರು ಗೆಳೆಯರ ಗುಂಪೊಂದು ನಿಷೇಧವಿದ್ದರೂ ಜಲಪಾತ ತುತ್ತ ತುದಿಗೆ ಹೋಗಿದೆ. ಆದ್ರೆ ಮಳೆ ಜೋರಾಗಿದ್ದರಿಂದ ನೀರಿನ ಪ್ರಮಾಣ ಒಂದೇ ಭಾರಿಗೆ ಹೆಚ್ಚಾಗಿದೆ. ಈ ವೇಳೆ ಐವರಲ್ಲಿ ಸುನೀಲ್ ಗುಪ್ತ ಎಂಬಾತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ನೀರಿನ ಮಧ್ಯದಿಂದ ಕೊಚ್ಚಿಕೊಂಡು ಬಂದಿದ್ದ ಆತ ಇನ್ನೇನೂ ಸ್ವಲ್ಪದರಲ್ಲೇ ದಡ ಸೇರುವವನಿದ್ದನೂ ಆದ್ರೆ ನೀರು ರಭಸದಿಂದ ಬಂದ ಕಾರಣ ಆತ ಜಲಪಾತದಲ್ಲಿ ಕೊಚ್ಚಿ ಹೋಗಿದ್ದಾನೆ. ಇದನ್ನೆಲ್ಲ ನೋಡುತ್ತಿದ್ದ ಉಳಿದ ಯುವಕರು, ಗೆಳೆಯನಿಗೆ ಸಹಾಯ ಮಾಡಲಾಗದೇ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು. ಇವೆಲ್ಲ ದೃಶ್ಯಗಳು ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Comments are closed.