ಅಂತರಾಷ್ಟ್ರೀಯ

159 ಅಡಿ ಉದ್ದದ ವಿಮಾನದ ಸಮುದ್ರ ಯಾನ! ಇದನ್ನು ಕೊಂಡೊಗುದು ಎಲ್ಲಿಗೆ ಅಂದುಕೊಂಡಿರ ..ಈ ವೀಡಿಯೋ ನೋಡಿ…

Pinterest LinkedIn Tumblr

ಎನಿಸ್ಕ್ರೋನ್: ಹಡುಗು ಸಮುದ್ರದ ಮೇಲೆ, ರೈಲು ಹಳಿ ಮೇಲೆ ಸಾಗಿದಂತೆ, ವಿಮಾನ ಆಕಾಶದಲ್ಲಿ ಹಾರಾಟ ನಡೆಸುತ್ತೆ. ಆದ್ರೆ ಐರ್ಲೆಂಡ್‍ನಲ್ಲಿ ವಿಮಾನವೊಂದು ಸಮುದ್ರಯಾನ ಬೆಳೆಸಿದೆ.

ಐರ್ಲೆಂಡ್‍ನ ಶಾನಾನ್ ಏರ್‍ವೇಸ್‍ಗೆ ಒಳಪಟ್ಟ ಬೋಯಿಂಗ್ 767 ವಿಮಾನವೊಂದು ತನ್ನ ಪ್ರಯಾಣ ಮುಗಿಸಿದ್ದು, ಸಮುದ್ರದಲ್ಲಿ ಪ್ರಯಾಣ ಬೆಳೆಸಿದೆ. ಸುಮಾರು 159 ಅಡಿ ಉದ್ದವಿರುವ ಈ ವಿಮಾನ 189ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಆದ್ರೆ ಈ ವಿಮಾನವೀಗ ಪ್ರಯಾಣಿಸಲು ಅಶಕ್ತವಾಗಿದ್ದು, ಈ ವಿಮಾನವೀಗ ರೆಸಾರ್ಟ್ ಆಗಿ ಮಾರ್ಪಡಾಗಲಿದೆ.

ಹೌದು. ಗ್ಲಾಂಪಿಂಗ್ ಎನ್ನುವ ರೆಸಾರ್ಟ್ ಕಂಪನಿಯ ಮಾಲೀಕ ಮಾಕ್ ಗೋವನ್ಸ್ ಈ ಹಳೆಯದಾದ ವಿಮಾನವನ್ನು ಖರೀದಿ ಮಾಡಿದ್ದು, ವಿಮಾನವನ್ನು ಹೈಫೈ ರೆಸಾರ್ಟ್ ಆಗಿ ಪರಿವರ್ತನೆ ಮಾಡಲಿದ್ದಾರೆ. ಈ ವಿಮಾನದಲ್ಲಿ ಗ್ರಾಹಕರಿಗೆ ರೆಸಾರ್ಟ್‍ನಲ್ಲಿರುವಂತೆ ವಸತಿ ವ್ಯವಸ್ಥೆ ಹಾಗೂ ಇನ್ನಿತರ ಕಲ್ಪಿಸಲಾಗುತ್ತದೆ. ಸದ್ಯ ಈ ಹಳೆಯ ಸಮುದ್ರಯಾನದ ಮೇಲೆ ಶನಿವಾರ ಪ್ರಯಾಣಬೆಳೆಸಿದ್ದು, ಹೊಸ ರೀತಿಯಲ್ಲಿ ಗ್ರಾಹಕರ ಸೇವೆಗೆ ಸಿದ್ಧವಾಗಲಿದೆ.

Write A Comment