ಅಂತರಾಷ್ಟ್ರೀಯ

ಹೈಟೆಕ್ ಫಿಶಿಂಗ್: ಮೀನು ಹಿಡಿಯೋಕೆ ಡ್ರೋನ್ ಬಳಕೆ!

Pinterest LinkedIn Tumblr

ಸಿಡ್ನಿ: ಮೀನು ಹಿಡಿಯೋಕೆ ಗಾಳ ಹಾಕಬಹುದು ಅಥವಾ ಬಲೆ ಹಾಕಬಹುದು. ಆದರೆ ಇಲ್ಲಿಬ್ಬರು ಮೀನು ಹಿಡಿಯೋಕೆ ಹೊಸದೊಂದು ಹೈ ಟೆಕ್ ಐಡಿಯಾ ಮಾಡಿದ್ದಾರೆ.

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಿವಾಸಿಗಳಾದ ಜೇಡನ್ ಮತ್ತು ಬೈರಾನ್ ಎಂಬ ಇಬ್ಬರು ಸ್ನೇಹಿತರು ಡ್ರೋನ್ ಬಳಸಿ ಮೀನು ಹಿಡಿದಿದ್ದಾರೆ.

ಡ್ರೋನ್‍ಗಳನ್ನ ಗೂಢಚಾರಿಕೆಗೆ, ಫೋಟೋ ತೆಗಿಯೋಕೆ ಇನ್ನೂ ಅನೇಕ ಸಂದರ್ಭಗಳಲ್ಲಿ ಉಪಯೋಗಿಸೋದನ್ನ ನೋಡಿರ್ತೀವಿ. ಆದ್ರೆ ಇವರು ಡ್ರೋನ್ ಬಳಸಿ ಮೀನು ಹಿಡಿಯೋದು ಎಷ್ಟು ಸುಲಭ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ಈ ಇಬ್ಬರು ಸ್ನೇಹಿತರು ಸಮುದ್ರ ತೀರದಲ್ಲಿ ನಿಂತು ಡ್ರೋನ್‍ಗೆ ಒಂದು ಗಾಳ ಕಟ್ಟಿ ಮೇಲಕ್ಕೆ ಹಾರಿಬಿಟ್ಟರು. ಒಬ್ಬ ಡ್ರೋನ್ ನಿಯಂತ್ರಿಸುತ್ತಿದ್ರೆ ಮತ್ತೊಬ್ಬ ದೈತ್ಯ ಮೀನು ಗಾಳಕ್ಕೆ ಬಿದ್ದ ತಕ್ಷಣ ಅದನ್ನ ತಟಕ್ಕೆ ಎಳೆಯಲು ಕಷ್ಟ ಪಡ್ತಿದ್ದ. ಅಂತೂ ಇಬ್ಬರೂ ಸೇರಿ ಹೈ ಟೆಕ್ ಫಿಶಿಂಗ್ ಮಾಡಿ 20 ಕೆಜಿ ತೂಕದ ಟ್ಯೂನಾ ಜಾತಿಯ ಮೀನನ್ನ ಹಿಡಿದೇ ಬಿಟ್ರು.

Write A Comment