ಅಂತರಾಷ್ಟ್ರೀಯ

ಸಿಟ್ಟಿಗೆದ್ದ ಘೇಂಡಾಮೃಗ ಕಾರಿನ ಮೇಲೆ ದಾಳಿ ಮಾಡಿದ್ದನ್ನು ನೋಡಿ

Pinterest LinkedIn Tumblr

ವಿಂಡ್‍ಹಾಕ್: ಆನೆಗಳು ಸಿಟ್ಟೆಗೆದ್ದರೆ ವಾಹನಗಳ ಮೇಲೆ ದಾಳಿ ಮಾಡುವುದು ಸಾಮಾನ್ಯ ಆದರೆ ನಮಿಬಿಯಾದಲ್ಲಿ ಘೇಂಡಾಮೃಗವೊಂದು ಸಿಟ್ಟಿಗೆದ್ದು ಕಾರಿನ ಮೇಲೆ ದಾಳಿ ಮಾಡಿ ಶೇಕ್ ಮಾಡಿದೆ.

ನಮಿಬಿಯಾದ ಇತೋಷಾ ಪಾರ್ಕ್‍ನಲ್ಲಿ ಈ ಘಟನೆ ನಡೆದಿದ್ದು, ಸಫಾರಿ ವೇಳೆ ನಿಲ್ಲಿಸಿದ್ದ ಕಾರಿನ ಮೇಲೆ ಘೇಂಡಾಮೃಗ ತನ್ನ ಪ್ರತಾಪ ತೋರಿಸಿದೆ. ಎರಡು ಬಾರಿ ಕಾರಿನ ಮೇಲೆ ತನ್ನ ಚೂಪಾದ ಕೊಂಬಿನಿಂದ ತಿವಿದಿದೆ.

ಘೇಂಡಾಮೃಗಗಳು ವಾಹನಗಳ ಮೇಲೆ ದಾಳಿ ಮಾಡುವುದು ಅಪರೂಪ. ಆದರಲ್ಲೂ ದಾಳಿ ಮಾಡುತ್ತಿರುವ ದೃಶ್ಯ ಸೆರೆ ಸಿಕ್ಕಿದ್ದು ಅಪರೂಪ ಎನ್ನಲಾಗುತ್ತಿದೆ. ದಾಳಿ ಹೇಗೆ ಮಾಡಿದೆ ಎನ್ನುವುದನ್ನು ಈ ವಿಡಿಯೋ ಕ್ಲಿಕ್ ಮಾಡಿ ನೋಡಿ.

Write A Comment