ಕರ್ನಾಟಕ

ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯರೊಂದಿಗಿನ ಸಂವಾದದಲ್ಲಿ ಪ್ರಶ್ನೆ ಕೇಳಿ ತಬ್ಬಿಬ್ಬಾದ ಎಐಸಿಸಿ ಉಪಾಧ್ಯಕ್ಷ ರಾಹುಲ್​ಗಾಂಧಿ ! ಯಾವ ರೀತಿ ವಿದ್ಯಾರ್ಥಿನಿಯರು ಪೀಚಿಗೀಡು ಮಾಡಿದರು ಈ ವೀಡಿಯೋ ನೋಡಿ…

Pinterest LinkedIn Tumblr

rahul

ಬೆಂಗಳೂರು: ನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿಗೆ ವಿದ್ಯಾರ್ಥಿನಿಯರು ಅಚ್ಚರಿ ಮೂಡಿಸಿದ ಪ್ರಸಂಗ ನಡೆಯಿತು.

ಸಂವಾದದಲ್ಲಿ ಸ್ವಚ್ಛ ಭಾರತ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ಈ ವೇಳೆ ವಿದ್ಯಾರ್ಥಿನಿಯರು,’ ‘ಸರಿಯಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು. ನಂತರ ಮೇಕ್ ಇನ್ ಇಂಡಿಯಾ ಕೆಲಸ ಮಾಡುತ್ತಿದೆಯೇ ಎಂದು ಪ್ರಶ್ನಿಸಿದರು. ಈ ವೇಳೆ ವಿದ್ಯಾರ್ಥಿನಿಯರು ‘ಹೌದು’ ಕೆಲಸ ಮಾಡುತ್ತಿದೆ ಎಂದು ಪ್ರತಿಕ್ರಿಯೆ ನೀಡಿದರು.

ರಾಹುಲ್ ಆಗಮನದ ಹಿನ್ನೆಲೆಯಲ್ಲಿ ಕಾಲೇಜು ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿತ್ತು. ಗುರುತಿನ ಚೀಟಿ ಪರಿಶೀಲಿಸಿ ವಿದ್ಯಾರ್ಥಿಗಳನ್ನು ಒಳಗೆ ಬಿಡಲಾಗಿತ್ತು. ಸಂವಾದದಲ್ಲಿ ದ್ವಿತೀಯ ಹಾಗೂ ತೃತೀಯ ಡಿಗ್ರಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿತ್ತು. ಈ ವೇಳೆ ಸೆಲ್ಫಿಗಾಗಿ ಕಾದು ಕೂತಿದ್ದ ವಿದ್ಯಾರ್ಥಿನಿಯರಿಗೆ ರಾಹುಲ್ ದರ್ಶನ ಸಿಗಲಿಲ್ಲ.

ಕೃಪೆ: ಟೈಮ್ ನೌ 

https://youtu.be/N_ksRv1dm4E

Write A Comment