ಮುಂಬೈ

ಇನ್ನು ಮುಂಬೈ ಪೊಲೀಸರು ಜೋಡಿಗಳಿಗೆ ಕಿರುಕುಳ ನೀಡುವಂತಿಲ್ಲ!

Pinterest LinkedIn Tumblr

police

ಮುಂಬೈ, ನ. 26: 1951ರ ಬಾಂಬೆ ಪೊಲೀಸ್ ಕಾಯ್ದೆಯ ಭಯಾನಕ 110ನೆ ಪರಿಚ್ಛೇದ (ಸಾರ್ವಜನಿಕ ಸ್ಥಳದಲ್ಲಿ ಅಸಭ್ಯತೆ)ದಡಿ ಇನ್ನು ಮುಂದೆ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಮುಂಬೈ ಪೊಲೀಸರು ನಿರ್ಧರಿಸಿದ್ದಾರೆ.

ಇತ್ತೀಚೆಗೆ ಈ ಪರಿಚ್ಛೇದವನ್ನು ಬಳಸಿ ನಾಗರಿಕರಿಗೆ ಕಿರುಕುಳ ನೀಡಿದ ಮುಂಬೈ ಪೊಲೀಸರ ಕ್ರಮ ಭಾರೀ ಟೀಕೆಗೊಳಗಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನಗರದಲ್ಲಿ ಜೋಡಿಗಳಿಗೆ ಕಿರುಕುಳ ನೀಡಲು ಪೊಲೀಸರು ಹಲವು ಬಾರಿ ಈ ಕಾನೂನನ್ನು ಬಳಸಿದ್ದಾರೆ. ಅದರಲ್ಲೂ ಈ ಕಾಯ್ದೆಯನ್ನು ಆಗಸ್ಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಬಳಸಲಾಗಿತ್ತು. ಮಾದ್ ಐಲ್ಯಾಂಡ್ ಮತ್ತು ಅಕ್ಸ ಪ್ರದೇಶಗಳ ಹೊಟೇಲ್‌ಗಳಿಂದ 40ಕ್ಕೂ ಅಧಿಕ ಜೋಡಿಗಳನ್ನು ಈ ಕಾಯ್ದೆಯಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಪೊಲೀಸರ ಈ ನೈತಿಕ ಪೊಲೀಸ್‌ಗಿರಿಯ ವಿರುದ್ಧ ನಾಗರಿಕ ವಲಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿರುವ ಜೋಡಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವಂತೆ ಆಗಿನ ಪೊಲೀಸ್ ಕಮಿಶನರ್ ರಾಕೇಶ್ ಮರಿಯಾ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

Write A Comment