ಅಂತರಾಷ್ಟ್ರೀಯ

70 ವರ್ಷದ ಬಳಿಕ ಸಿಕ್ತು ಚಿನ್ನ ತುಂಬಿದ್ದ ರೈಲು !

Pinterest LinkedIn Tumblr

nazi-gold-train

ಪೋಲ್ಯಾಂಡ್: 1945 ರ ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿಯವರು ಭೂಮಿಯಲ್ಲಿ ಚಿನ್ನವಿದ್ದ ರೈಲನ್ನು ಅಡಗಿಸಿಟ್ಟಿದ್ದರು. ಇದೀಗ ಸುಮಾರು 70 ವರ್ಷದ ಬಳಿಕ ಆ ಸ್ಥಳವನ್ನು ಪತ್ತೆಹಚ್ಚಲಾಗಿದೆ.

ಯುದ್ಧದ ಸಂದರ್ಭದಲ್ಲಿ ರಷ್ಯಾದ ರೆಡ್ ಆರ್ಮಿಯ ಕಣ್ಣಿಗೆ ಬೀಳದಂತೆ ಜರ್ಮನ್ ಪಡೆ ಚಿನ್ನವನ್ನು ರೈಲಿನಲ್ಲಿ ತುಂಬಿಸಿ ಅದನ್ನು ರೈಲ್ವೇ ಹಳಿಯ ಕೆಳಗೆ ಹೂತಿದ್ದರು. ಇದೀಗ ರಡಾರ್‍ನ ಸಹಾಯದಿಂದ ರೈಲನ್ನು ಹೂತಿರುವ ಸ್ಥಳ ಪತ್ತೆಯಾಗಿದ್ದು ಅದರ ಶೋಧ ಕಾರ್ಯವನ್ನು ಆರಂಭಿಸಲಾಗಿದೆ.

ಎಲ್ಲಿದೆ?: ರೈಲು ಹೂತಿರುವ ಜಾಗ ಬರ್ಲಿನ್‍ನಿಂದ 300 ಮೈಲಿ ದೂರವಿರುವ ವ್ರೋಕ್ಲಾವ್ ಮತ್ತು ವಾಲ್‍ಬ್ರಿಸ್ಜ್ ಮಧ್ಯದಲ್ಲಿದೆ ಎಂದು ಗುರುತಿಸಲಾಗಿದೆ. ಈ ರೈಲಿನಲ್ಲಿ ಚಿನ್ನ ಸೇರಿದಂತೆ ಜರ್ಮನ್ ಪಡೆಯ ಶಸ್ತ್ರಾಸ್ತ್ರಗಳು ಮತ್ತು ಬೆಲೆಬಾಳುವ ಅಮೂಲ್ಯವಾದ ಕಲಾಕೃತಿಗಳು ಇರಬಹುದು ಎಂದು ಶಂಕಿಸಲಾಗಿದೆ.

https://youtu.be/_0UEwCoAvbE

Write A Comment