ಅಂತರಾಷ್ಟ್ರೀಯ

ವಿಮಾನ ಟೇಕಾಫ್ ವೇಳೆ ಬೆಂಕಿ: ಕೂದಲೆಳೆ ಅಂತರದಲ್ಲಿ 172 ಮಂದಿ ಪಾರಾದ ವಿಡಿಯೋ

Pinterest LinkedIn Tumblr

vegas-plane-british-airways

ಲಾಸ್ ವೇಗಾಸ್: ಇನ್ನೇನು ಟೇಕಾಫ್ ಮಾಡಬೇಕೆನ್ನುವ ಹೊತ್ತಲ್ಲಿ ವಿಮಾನದ ಕೆಳಭಾಗಕ್ಕೆ ಬೆಂಕಿ ಹೊತ್ತಿಕೊಂಡು 14 ಮಂದಿ ಗಾಯಗೊಂಡ ಘಟನೆ ಲಾಸ್ ವೇಗಾಸ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಬ್ರಿಟಿಷ್ ಏರ್​ವೇಸ್​ಗೆ ಸೇರಿದ ವಿಮಾನ ಇದಾಗಿದೆ.

ಬೋಯಿಂಗ್ 777 ವಿಮಾನ ಟೇಕಾಫ್ ಮಾಡುವ ಹಂತದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ವಿಮಾನ ಟೇಕಾಫ್ ಮಡದಂತೆ ಮಾಹಿತಿ ನೀಡಲಾಗಿದ್ದು, ವಿಮಾನದೊಳಕ್ಕಿದ್ದವರನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಲಾಗಿದೆ. 14 ಮಂದಿ ಸಣ್ಣಪುಟ್ಟ ಗಾಯಗಳಾಗಿವೆ. ವಿಮಾನ ಟೇಕಾಫ್ ಆಗುವುದಕ್ಕೂ ಮುನ್ನವೇ ಕಾಣಿಸಿಕೊಂಡಿದ್ದರಿಂದ ನಡೆಯಬಹುದಾದ ದುರಂತ ತಪ್ಪಿದೆ ಎಂದು ಕ್ಲಾರ್ಕ್ ಕೌಂಟಿಯ ಅಗ್ನಿಶಾಮಕ ದಳದ ಮುಖ್ಯಸ್ಥ ಜಾನ್ ಕ್ಲಾಸ್ಸೆನ್ ತಿಳಿಸಿದ್ದಾರೆ.

ಘಟನೆ ಬೆಳಗ್ಗೆ 4 ಗಂಟೆ ಸುಮಾರಿಗೆ ನಡೆದಿದೆ. ಇದು ಬ್ರಿಟಿಷ್ ಏರ್​ವೇಸ್​ಗೆ ಸೇರಿದ 2276 ನಂಬರ್​ನ ವಿಮಾನವಾಗಿದೆ. ಲಾಸ್ ವೇಗಾಸ್​ನಿಂದ ಲಂಡನ್​ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು.

https://youtu.be/IPUnMb_lKwU

Write A Comment