ಕರಾವಳಿ

ತ್ರಾಸಿ: ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಓರ್ವ ಮೃತ್ಯು

Pinterest LinkedIn Tumblr

ಗಂಗೊಳ್ಳಿ: ಬೈಕ್‌ಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಸವಾರ ಸಾವನ್ನಪ್ಪಿದ ಘಟನೆ ಸೋಮವಾರ ತ್ರಾಸಿ ಬೀಚ್ ಬಳಿಯ ಅರಮ ದೇವಸ್ಥಾನದ ಎದುರು ಸಂಭವಿಸಿದೆ.

ಭಟ್ಕಳ ಸಣಭಾವಿ ನಿವಾಸಿ ದೀಪಕ್ ನಾಗಪ್ಪ ನಾಯ್ಕ್ (23) ಸಾವನ್ನಪ್ಪಿದ ಬೈಕ್ ಸವಾರ.

ಇನ್ನೊಂದು ಬೈಕ್ ನಲ್ಲಿದ್ದ ಪಡುಕೋಣೆಯ ಪೆಟ್ರಿಕ್ ವಾಸ್ (63) ಹಾಗೂ ಸಹಸವಾರೆ ಅವರ ಪುತ್ರಿ ಗಾಯಗೊಂಡಿದ್ದಾರೆ. ಈ ಪೈಕಿ ತೀವ್ರ ತರದ ಗಾಯಗೊಂಡ ಪೆಟ್ರೀಕ್ ಅವರನ್ನು ಮಣಿಪಾಲ ಆಸ್ಪತ್ರೆ ಹಾಗೂ ಪುತ್ರಿಯನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಗಂಗೊಳ್ಳಿ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ನೆರವಾದರು.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

Comments are closed.