ಕರಾವಳಿ

ಹೊಸಂಗಡಿ | ಕಾಡುಕೋಣ ದಾಳಿಯಿಂದ ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯ

Pinterest LinkedIn Tumblr

ಕುಂದಾಪುರ: ಹೊಸಂಗಡಿ ಮಸೀದಿ ಸಮೀಪ ಸಂಜೆ ಹೊತ್ತಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದ ತೊಂಬಟ್ಟು ಕಲ್ಮಕ್ಕಿ ಶ್ರೀನಿವಾಸ್ ನಾಯಕ್ ಅವರ ಮೇಲೆ ಕಾಡುಕೋಣ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಬಗ್ಗೆ ವರದಿಯಾಗಿದೆ.

ರಿಕ್ಷಾ ಚಾಲಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಮಾಹಿತಿಯನ್ನು ಪಡೆದ ಶಂಕರನಾರಾಯಣ ವಲಯ ಅರಣ್ಯಧಿಕಾರಿ ಸಂದೇಶ ಅವರು ಗಸ್ತು ಅರಣ್ಯ ಪಾಲಕರನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ಮಾಹಿತಿ ಪಡೆದರು.

ಅವರ ಮನೆಯವರಿಗೆ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿ ಸಹಾಯದ ಭರವಸೆಯನ್ನು ನೀಡಿದರು.

Comments are closed.