ಕುಂದಾಪುರ: ಮೇ.11 ರಂದು ರಾತ್ರಿ ಮರವಂತೆ ಸಮೀಪದ ತನ್ನ ಅಂಗಡಿ ಸಮೀಪದಲ್ಲಿ ಸಂಬಂಧಿಯೊಬ್ಬರು ನಿಲ್ಲಿಸಿದ್ದ ಕಾರನ್ನು ಕಳವುಗೈಯಲು ಯತ್ನಿಸುತ್ತಿದ್ದ ಇಬ್ಬರು ಅಪರಿಚಿತರು ತನ್ನನ್ನು ದೂಡಿ ಪರಾರಿಯಾಗಿದ್ದು ಈ ಬಗ್ಗೆ ಸ್ಥಳೀಯ ನಿವಾಸಿ ರಿತೇಶ ಎನ್ನುವರು ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ಅವರನ್ನು ವಿಚಾರಣೆಗೊಳಪಡಿಸಿ ಉಡುಪಿಯ ಬಾಲಾಪರಾಧಿ ನ್ಯಾಯ ಮಂಡಳಿ ಎದುರು ಹಾಜರುಪಡಿಸಿದ್ದಾರೆ.
ಘಟನೆ ವಿವರ: ರಿತೇಶ್ ಎನ್ನುವರ ಶಾಮಿಯಾನ ಅಂಗಡಿಯ ಪಕ್ಕದಲ್ಲೆ ಇರುವ ಸರ್ವಿಸ್ ಸ್ಟೇಶನ್ ಎದುರು ಅವರ ಸಂಬಂಧಿ ನಿಲ್ಲಿಸಿದ್ದ ಕಾರನ್ನು ಇಬ್ಬರು ಆರೋಪಿಗಳು ಕಳವುಗೈಯಲು ಯತ್ನಿಸುತ್ತಿದ್ದಾಗ ಕೆಲಸ ಮುಗಿಸಿ ಬಂದ ರಿತೇಶ್‌ರನ್ನು ಕಂಡು ಅವರನ್ನು ದೂಡಿ ಕಳ್ಳತನ ಕೃತ್ಯಕ್ಕೆ ತಂದಿದ್ದ ಬೈಕನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿದ್ದರು.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.