ಕುಂದಾಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಲೈಮಾನ್ ಮುಹಮ್ಮದ್ ಬ್ಯಾರಿ ಗುಲ್ವಾಡಿಯವರನ್ನು ಜಮೀಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಅಬು ಮೊಹಮ್ಮದ್ ಅವರು ಸನ್ಮಾನಿಸಿ ಮಾತನಾಡಿ, ಸುಲೈಮಾನ್ರ ಸಾಮಾಜಿಕ ಕಳಕಳಿಯ ಸೇವೆಯನ್ನು ಗುರುತಿಸಿ ಜಿಲ್ಲಾ ಆಡಳಿತ ನೀಡಿರುವ ಈ ಪ್ರಶಸ್ತಿ ಹೆಮ್ಮೆಯ ವಿಚಾರ. ಇವರಿಂದ ಈ ಸಮಾಜಕ್ಕೆ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಹಿರಿಯರು ಮಾಜಿ ಅಧ್ಯಕ್ಷರಾದ ಶೇಕ್ ಅಬು ಮಹಮ್ಮದ್, ಜಾಮಿಯಾ ಮಸೀದಿಯ ಕಾರ್ಯದರ್ಶಿ ತಬ್ರೇಜ್, ಕುಂದಾಪುರ ತಾಲೂಕು ಘಟಕದ ಪದಾಧಿಕಾರಿಗಳಾದ ಮೊಹಮ್ಮದ್ ಅಲಿ, ಕೋಡಿ ಶಹಬಾನ್ ಹಂಗಳೂರು, ಕಾರ್ಯದರ್ಶಿ ಅಬ್ದುಲ್ ಸಲಾಂ ಚಿತ್ತೂರು, ಫಝಲ್ ಮೌಲಾನ ಕಂಡ್ಲೂರು, ಅಯೂಬ್ ಮೌಲಾನ ಕುಂದಾಪುರ, ಖತೀಬ್ ಅಶ್ಪಾಕ್, ರಜಾಕ್ ಬಿಜಾಡಿ, ರಿಯಾಜ್ ಕೋಡಿ ಲ, ಜಮಾಲ್ ಗುಲ್ವಾಡಿ ಅಲ್ಫಾಜ್, ಅಶ್ಫಾಕ್ ಮೂಡುಗೋಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಚಿತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Comments are closed.