ಉಡುಪಿ: ಜಿಲ್ಲೆಯಲ್ಲಿ ನಡೆದ ನಾಗರಿಕ ಬಂದೂಕು ತರಬೇತಿ ಶಿಬಿರದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಹಾಗೂ ಸೈಬರ್ ಭದ್ರತಾ ಜಾಗೃತಿ ಮಾಸಾಚರಣೆಯ ಸಮಾರೋಪ ಸಮಾರಂಭ ಕಾರ್ಯಕ್ರಮವು ಶುಕ್ರವಾರ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನ ಚಂದು ಮೈದಾನ ಉಡುಪಿಯಲ್ಲಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿವೈಎಸ್ಪಿ ತಿಮ್ಮಪ್ಪ ಗೌಡ, ಇನ್ಸ್ಪೆಕ್ಟರ್ ರವಿಕುಮಾರ್ ಹಾಗೂ ಅಧಿಕಾರಿ-ಸಿಬ್ಬಂದಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ನಾಗರಿಕ ಬಂದೂಕು ತರಬೇತಿ ಪಡೆದ 200 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸೈಬರ್ ಭದ್ರತಾ ಜಾಗೃತಿ ಮಾಸಾಚಾರಣೆಯ ಅಂಗವಾಗಿ ಸೈಬರ್ ಸುರಕ್ಷತೆ ಕುರಿತಾಗಿ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ರೀಲ್ಗಳು, ಮೀಮ್ಸ್ಗಳು ಅಥವಾ ಚಿತ್ರಗಳು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ #CyberJagruthiUdupi ಮತ್ತು #CyberSafeUdupi ಹ್ಯಾಶ್ಟ್ಯಾಗ್ಗಳನ್ನು ಬಳಸಿ ಪೋಸ್ಟ್ ಮಾಡಲು ಏರ್ಪಡಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ :
ಸಾರ್ವಜನಿಕ ವಿಭಾಗ
📌ರೀಲ್ಸ್
ಪ್ರಥಮ :
ಆಕ್ಷನ್ ಕ್ರಿಯೇಷನ್ ಟೀಮ್ ಕಟಪಾಡಿ
ದ್ವಿತೀಯ:
1)ಡಿಪಾರ್ಟ್ಮೆಂಟ್ ಆಫ್ ಸೈಬರ್ ಸೆಕ್ಯೂರಿಟಿ ವಿಥ್ ಪ್ರೊಟೋನ್ ಅಸೋಸಿಯೇಷನ್ ಮತ್ತು ಎನ್.ಎಸ್.ಎಸ್ ಐಟಿ ವಿಂಗ್ ಎನ್ಎಮ್ಎಎಮ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ
2) ಜಾಲಿ ರೈಡ್ (ಇನ್ಸ್ಟಾಗ್ರಾಮ್ ಪೇಜ್)
📌ಮೆಮ್ಸ್
ಪ್ರಥಮ:ಮೇಡ್ ಇನ್ ಕುಂದಾಪ್ರ (ಇನ್ಸ್ಟಾಗ್ರಾಮ್ ಪೇಜ್)
ದ್ವಿತೀಯ: ಪ್ರಣತಿ
📌ಡ್ರಾಯಿಂಗ್ಸ್
ಪ್ರಥಮ:ಪರೀಕ್ಷಿತ್ ಆಚಾರ್
ದ್ವಿತೀಯ :ಆರ್ಯ
ಪೊಲೀಸ್ ವಿಭಾಗ:
📱ಸೈಬರ್ ಜಾಗೃತಿ ವಿಡಿಯೋ
ಪ್ರಥಮ:
ಮಂಜುನಾಥ್ ಸಿಎಚ್ಸಿ 60 ಶಿರ್ವ ಠಾಣೆ
ದ್ವಿತೀಯ:
1)ದಿನೇಶ್ ಎಂ ಸಿಎಚ್ಸಿ 1184, ಅಜೆಕಾರ್ ಠಾಣೆ
2)ಪವನಕುಮಾರ್ ಎಂ. ಸಿಪಿಸಿ 358, ಸೆನ್ ಠಾಣೆ
ಹಾಗೂ ಸೈಬರ್ ಭದ್ರತಾ ಜಾಗೃತಿ ಅಭಿಯಾನದಲ್ಲಿ ಸಹಕರಿಸಿದ ಸೃಜನ್ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
Comments are closed.