ಕರಾವಳಿ

ಉಡುಪಿ ಹಾವಂಜೆಯ ಭೋಧಿ ಸತ್ವ ಬುದ್ದ ಫೌಂಡೇಶನ್ ವತಿಯಿಂದ ಧಮ್ಮ ದೀಕ್ಷಾ ದಿನಾಚರಣೆ

Pinterest LinkedIn Tumblr

ಉಡುಪಿ: ಉಡುಪಿ ಹಾವಂಜೆಯ ಭೋಧಿ ಸತ್ವ ಬುದ್ದ ಫೌಂಡೇಶನ್ ವತಿಯಿಂದ ಧಮ್ಮ ದೀಕ್ಷಾ ದಿನಾಚರಣೆ ಕಾರ್ಯಕ್ರಮ  ಹಾವಂಜೆ ಬುದ್ದ ವಿಹಾರದಲ್ಲಿ ನಡೆಯಿತು.

ಈ ಪ್ರಯುಕ್ತ  ವಿಹಾರದಲ್ಲಿ ವಿಶೇಷ  ಬುದ್ಧವಂದನೆ, ಧ್ಯಾನ, ಮೈತ್ರಿ ಧ್ಯಾನ ಕಾರ್ಯಕ್ರಮ  ಜರಗಿತು. ಈ ಸಂಧರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಂತಹ ಬೌದ್ದ  ಅನುಯಾಯಿಗಳು ಬೌದ್ದ ಧಮ್ಮ ಧೀಕ್ಷೆ ಸ್ವೀಕರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ  ಮಾತನಾಡಿದ ಬೋದಿ ಸತ್ವ ಬುದ್ದ ಫೌಂಡೇಶನ್  ಅಧ್ಯಕ್ಷ ಶೇಖರ್ ಹಾವಂಜೆ , ಉಡುಪಿ ಜಿಲ್ಲೆಯಲ್ಲಿ ಬೌದ್ದ ಧಮ್ಮದೀಕ್ಷೆ ಸ್ವೀಕರಿಸಿದ ಐತಿಹಾಸಿಕ ದಿನ ಇದಾಗಿದೆ. ಇದು ಉಡುಪಿ ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ವಿಚಾರ. ಬೌದ್ದ ಧರ್ಮವನ್ನು ಹಾಗೂ‌ ಬಾಬಾ ಸಾಹೇಬರನ್ನು ಅರಿತುಕೊಂಡವರಿಗೆ ಮಾತ್ರ ಇದು ಸಾಧ್ಯ ಎಂದರು. ಇಂದು ದೀಕ್ಷೆ ಸ್ವೀಕರಿಸಿದವರು ಮುಂದಿನ ದಿನಗಳಲ್ಲಿ ಇಡೀ‌ ಜಿಲ್ಲೆಗೆ ಧಮ್ಮದ ಮಹತ್ವವನ್ನು ತಿಳಿಸುವ ಮಹಾನ್ ವ್ಯಕ್ತಿಗಳಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್.ಆರ್. ಲಕ್ಷ್ಮಣ್  ಮಂಗಳೂರು ಹಿರಿಯ ಧಮ್ಮಾಚಾರಿಗಳು, ಶಂಭು ಸುವರ್ಣ ಕೊಡವೂರು ಉಡುಪಿಯ ಧಮ್ಮಾಚಾರಿಗಳು, ಗೋಪಾಲ್ ಶಿವಪುರ ಜಿಲ್ಲಾ ಸಂಘಟನಾ ಸಂಚಾಲಕರು ಕ ದಸಂಸ ಭೀಮವಾದ (ರಿ)ಉಡುಪಿ ಜಿಲ್ಲೆ, ವಿಠ್ಠಲ್ ಸಾಲಿಕೇರಿ ಹಿರಿಯ ಉಪಾಸಕರು, ರವಿಕಲಾ ಎಸ್ ಕೆ ಟೀಚರ್, ಸುಜಾತ ಎಸ್ ಹಾವಂಜೆ, ಅನಿಲ್ ಫೆರ್ನಾಂಡಿಸ್ ಬಾರ್ಕೂರು, ಪ್ರಭಾಕರ್ ಮೆಸ್ತಾ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅನೇಕ ಉಪಾಸಕ ಉಪಾಸಿಕರು, ಭಗವಾನ್ ಬುದ್ಧರ ಹಾಗೂ ಬಾಬಾಸಾಹೇಬರ ಅನುಯಾಯಿಗಳು, ಉಪಸ್ಥಿತರಿದ್ದರು.

ಜಯಶೀಲಾ ಬಿ. ರೋಟೆ ನಿರೂಪಸಿ ಸ್ವಾಗತಿಸಿದರು.ಪೃಥ್ವಿ ಒಳಗುಡ್ಡೆ ವಂದಿಸಿದರು.

Comments are closed.