ಉಡುಪಿ: ಎಕೆಎಂಎಸ್ ಬಸ್ ಮಾಲಿಕ 52 ವರ್ಷ ಪ್ರಾಯದ ಸೈಯಿಪುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದು ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಘಟನೆ ವಿವರ: ಕೊಲೆಯಾದ ಸೈಫುದ್ದೀನ್ ಖಾಸಗಿ ಬಸ್ಸು (ಎಕೆಎಂಎಸ್) ವ್ಯವಹಾರ ನಡೆಸಿಕೊಂಡಿದ್ದು, ಉಡುಪಿ ಕುಕ್ಕಿಕಟ್ಟೆಯ ನಿವಾಸಿಯಾದ ಫೈಜಲ್ ಖಾನ್ ಮತ್ತು ಉಡುಪಿ ದೊಡ್ಡಣಗುಡ್ಡೆ ನಿವಾಸಿ ಶರೀಪ್ ಎನ್ನುವರು ಸೈಯಿಪುದ್ದಿನ್ ಸ್ನೇಹಿತರಾಗಿದ್ದು ಸೆ.27 ರಂದು ಬೆಳಿಗ್ಗೆ ಫೈಜಲ್ ಖಾನ್ ಸೈಫುದ್ದೀನ್ ಮನೆಗೆ ಬಂದು ಬಸ್ಸಿನ ವ್ಯವಹಾರದ ಕುರಿತು ಮಾತನಾಡಲು ಮಂಗಳೂರಿಗೆ ಹೋಗಬೇಕೆಂದು ಹೇಳಿದಂತೆ ಫೈಜಲ್ ಖಾನ್‌ನೊಂದಿಗೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ಮನೆಯ ಬಳಿಯಿಂದ ಅವರ ಕಾರಿನಲ್ಲಿ ಹೋಗಿದ್ದು, ಅವರ ಸ್ನೇಹಿತನಾದ ಫೈಜಲ್ ಖಾನ್ ಮತ್ತು ಶರೀಫ್ ಇತರರೊಂದಿಗೆ ಸೇರಿಕೊಂಡು ಸೈಯಿಪುದ್ದಿನ್ ಅವರನ್ನು ಕೊಲ್ಲುವ ಉದ್ದೇಶದಿಂದ ಮಲ್ಪೆಗೆ ಕರೆದುಕೊಂಡು ಬಂದು ಬೆಳಿಗ್ಗೆ ಉಡುಪಿ ತಾಲೂಕು ಕೊಡವೂರು ಗ್ರಾಮದ ನಾಗಬನದ ಬಳಿ ಮಚ್ಚಿನಿಂದ ತಲೆಗೆ ಮತ್ತು ಬೆನ್ನಿಗೆ ಕೊಚ್ಚಿ ಕೊಲೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ತನಿಖೆಯ ಬಗ್ಗೆ ಮೂರು ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿರುತ್ತದೆ. ಮೃತ ಸೈಯಿಪುದ್ದಿನ್ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
Comments are closed.