ಕರಾವಳಿ

ಕಳೆದು ಹೋಗಿದ್ದ ಮೂರು ಮೊಬೈಲ್‌ಗಳನ್ನು ಪತ್ತೆ ಮಾಡಿ ಸಂಬಂಧಪಟ್ಟವರಿಗೆ ಹಸ್ತಾಂತರಿಸಿದ ಗಂಗೊಳ್ಳಿ ಪೊಲೀಸರು

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ 3 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಿ ಸೆ. 21 ರಂದು ಸಂಬಂಧಿಸಿದವರಿಗೆ ಹಸ್ತಾಂತರಿಸಲಾಯಿತು.

ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಇದರ ಮೂಲಕವಾಗಿ ಮೊಬೈಲ್ ಪತ್ತೆ ಮಾಡಲಾಗಿದೆ‌. ಗಂಗೊಳ್ಳಿ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ  ಪೊಲೀಸ್ ಉಪ ನಿರೀಕ್ಷಕರು ಪವನ್ ನಾಯಕ್ ನೇತೃತ್ವದಲ್ಲಿ ಸಹಾಯಕ ಉಪನಿರೀಕ್ಷಕರುಗಳು ಮೊಬೈಲ್ ಕಳೆದುಕೊಂಡವರಿಗೆ ಠಾಣೆಯಲ್ಲಿ ಮೊಬೈಲ್ ಹಸ್ತಾಂತರಿಸಿದರು.

Comments are closed.