ಕರಾವಳಿ

ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ.) ಮಂಗಳೂರು ಹಾಗೂ ದೇವಾಡಿಗ ಸಂಘ ದುಬೈ: ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Pinterest LinkedIn Tumblr

ಮಂಗಳೂರು: ಪ್ರಸಕ್ತ ಕಾಲಘಟ್ಟದಲ್ಲಿ ಕಣ್ಣಾರೆ ಕಂಡರು ಪರಂಬರಿಸು ನೋಡುವ ಪರಿಪಾಠವನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿದು ಜೀವನದಲ್ಲಿ ಮುಂದೆ ಸಾಗಿದಾಗ ಸಾಧನೆ, ಯಶಸ್ಸು ನಿಶ್ಚಿತ ಎಂದು ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ.) ಮಂಗಳೂರು ಇದರ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷರು, ದುಬೈ ಉದ್ಯಮಿಗಳಾದ ಹರೀಶ್ ಶೇರಿಗಾರ್ ಹೇಳಿದರು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ.) ಮಂಗಳೂರು ಹಾಗೂ ದೇವಾಡಿಗ ಸಂಘ ದುಬೈ ಇವರ ಆಶ್ರಯದಲ್ಲಿ ಸೆ.7 ರವಿವಾರ ಮಂಗಳೂರಿನ ಮಣ್ಣಗುಡ್ಡದಲ್ಲಿರುವ ದೇವಾಡಿಗ ಸಮಾಜಭವನದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ‘ಮಂಗಳಾ ಶಾಲೆ’ ನೂತನ ವೆಬ್‌ಸೈಟ್ ಅನಾವರಣಗೊಳಿಸಿ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ.) ಮಂಗಳೂರು ಮುಂದಿನ ವರ್ಷ ಎಪ್ರಿಲ್‌ನಲ್ಲಿ ಶತಮಾನೋತ್ಸವ ಆಚರಿಸುತ್ತಿದ್ದು ಸಂಭ್ರಮದಿಂದ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಈ ಪ್ರಯುಕ್ತ ಮಂಗಳಾ ಶಾಲೆಯನ್ನು ಅಭಿವೃದ್ದಿ ಜೊತೆಗೆ, ಕ್ಯಾಂಪಸ್, ಕಟ್ಟಡ ಮೊದಲಾದವುಗಳನ್ನು ನಿರ್ಮಿಸುವ ‘ಮಂಗಳಾ ಮಿಷನ್’ ಯೋಜನೆಗೆ ಮುನ್ನುಡಿ ಬರೆಯಲಾಗಿದೆ ಎಂದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಹಿಂದಿನ ಕಾಲದಲ್ಲಿ ವಿದ್ಯಾರ್ಥಿ ವೇತನದ ಪರಿಕಲ್ಪನೆ ಇರಲಿಲ್ಲ. ಆದರೆ ಇಂದು ಶೈಕ್ಷಣಿಕ ವ್ಯವಸ್ಥೆಗೆ ಉತ್ತೇಜನ‌ ನೀಡಲು ಸಂಘಸಂಸ್ಥೆ, ಸಮುದಾಯದ ಸಂಘಟನೆಗಳು ಮುಂದೆಬರುತ್ತಿರುವುದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಬೇಕು. ಉಪಕಾರ ಸ್ಮರಣೆ, ಋಣ ತೀರಿಸುವ ಮನೋಭಾವನೆ, ಮಾನವೀಯತೆ, ಸಂಸ್ಕಾರ, ಹಿತಿಯರಿಗೆ ಗೌರವ ನೀಡುವ ವಿನಯತೆ ಬೆಳೆಸಿಕೊಳ್ಳಬೇಕು. ಮಕ್ಕಳು ನೆಲ-ಜಲ, ಸಂಸ್ಕೃತಿ ಅರಿಯಲು ಶಿಕ್ಷಣ ಸಂಸ್ಥೆಗಳು ನೈತಿಕವಾಗಿ ಅವರನ್ನು ರೂಪುಗೊಳಿಸಬೇಕು ಎಂದರು.

ಇಂಡಿಯನ್ ರೆಡ್ ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ  ಸಿ.ಎ. ಶಾಂತರಾಮ ಶೆಟ್ಟಿ‌ ಮಾತನಾಡಿ, ದೇವಾಡಿಗ ಸಮಾಜ ಸಣ್ಣ ಸಮುದಾಯವಾದರೂ ಕೂಡ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದ ಹೆಗ್ಗಳಿಕೆ ಇದೆ. ದೇವಾಡಿಗರು ಇತರ ಎಲ್ಲಾ ಸಮಾಜದೊಂದಿಗೆ ಬೆರೆಯುವುದು ಮಾದರಿ. ಹಳ್ಳಿ ಭಾಗದ ಜನರ ಶಿಕ್ಷಣ ಹಾಗೂ ಆರೋಗ್ಯದ ವಿಚಾರದಲ್ಲಿ ಸಂಘಟನೆಯೊಂದಿಗೆ ಕೈಜೋಡಿಸುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಾಜಿ ಪ್ರಧಾನ‌ಕಾರ್ಯದರ್ಶಿ ಬಾಬು ದೇವಾಡಿಗ ಆಂಬ್ಲಮೊಗರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಐಚ್ಛಿಕ ವಿಚಾರದಲ್ಲಿ ಮುಂದುವರಿದು ಸಾಧನೆಯ ಮೈಲಿಗಲ್ಲು ಏರಬೇಕು. ವಿವಿಧ ಸಂಘಸಂಸ್ಥೆಗಳು, ಫೌಂಡೇಶನ್‌ಗಳು ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹ ನೀಡುತ್ತಿದ್ದು ಅದರ ಸದುಪಯೋಗ ಪಡೆಯಬೇಕು. ಸಮಾಜ ಸದೃಢವಾಗಿ ಬೆಳೆಯಲು ವಿದ್ಯೆಯಿಂದ ಸಾಧ್ಯ. ಮಕ್ಕಳಿಗೆ ಬೇಕಾದ ಶೈಕ್ಷಣಿಕ ಸವಲತ್ತು ನೀಡಿ. ವಿದ್ಯೆ  ಪಡೆದವರ ಮನೆ ಬೆಳಗುತ್ತದೆ ಎಂದರು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘ‌ (ರಿ) ಮಂಗಳೂರು ಅಧ್ಯಕ್ಷ ಅಶೋಕ್ ಮೊಯಿಲಿ‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ದೇವಾಡಿಗ ಮಹಾಮಂಡಲ ಮುಂಬೈ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಮಾಜಿ ಅಧ್ಯಕ್ಷ ಡಾ. ದೇವರಾಜ್ ಕೆ., ಕೊಲ್ಲೂರು ಶ್ರೀ‌ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಘುರಾಮ್ ದೇವಾಡಿಗ ಆಲೂರು, ಲೋಕೋಪಯೋಗಿ ಇಲಾಖೆ ನಿವೃತ್ತ ಇಂಜಿನಿಯರ್ ಚೆನ್ನಪ್ಪ ಮೊಯಿಲಿ, ಉಪ್ಪುಂದ ದೇವಾಡಿಗ ಸಂಘದ ಗೌರವಾಧ್ಯಕ್ಷ ಜನಾರ್ಧನ ಉಪ್ಪುಂದ, ಉದ್ಯಮಿ ಲಯನ್ ಸುಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ‌ (ರಿ) ಮಂಗಳೂರು ಇದರ ಉಪಾಧ್ಯಕ್ಷ ಕರುಣಾಕರ್ ಎಮ್.ಎಚ್., ಪ್ರಧಾನ ಕಾರ್ಯದರ್ಶಿ ವೀಣಾ ಗಣೇಶ್, ಕೋಶಾಧಿಕಾರಿ ಗೀತಾ ವಿ. ಕಲ್ಯಾಣ್‌ಪುರ್, ಜೊತೆ ಕಾರ್ಯದರ್ಶಿಗಳಾದ ಉದಯ್ ಕುಮಾರ್ ಕಣ್ವತೀರ್ಥ, ರೋಹಿತಾಕ್ಷ ಮರೋಳಿ, ಸಂಘಟನಾ ಕಾರ್ಯದರ್ಶಿ ಸತೀಶ್, ಮಹಿಳಾ ಸಂಘಟನೆಯ ಅಧ್ಯಕ್ಷೆ ಜ್ಯೋತಿ ಪ್ರವೀಣ್, ಕಾರ್ಯದರ್ಶಿ ಜ್ಯೋತಿ ಸುನೀಲ್, ಯುವ ಸಂಘಟನೆ ಅಧ್ಯಕ್ಷ ಸುಮಿತ್ ದೇವಾಡಿಗ, ಕಾರ್ಯದರ್ಶಿ ಅವಿನಾಶ್ ಹಾಗೂ ಕೇಂದ್ರ ಸಮಿತಿ ಮತ್ತು ಮಹಿಳಾ ಹಾಗೂ ಯುವ ಸಂಘಟನೆ ಪದಾಧಿಕಾರಿಗಳಿದ್ದರು.

(ಚಿತ್ರಗಳು, ವರದಿ- ಯೋಗೀಶ್ ಕುಂಭಾಶಿ)

Comments are closed.