ಕರಾವಳಿ

ಶಂಕರನಾರಾಯಣ ಪೊಲೀಸ್ ಠಾಣೆ ನೂತನ ಪಿಎಸ್ಐ ಆಗಿ ಐ.ಆರ್. ಗಡ್ಡೇಕರ್ ನೇಮಕ

Pinterest LinkedIn Tumblr

ಕುಂದಾಪುರ: ಶಂಕರನಾರಾಯಣ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ನೂತನ ಉಪನಿರೀಕ್ಷಕರಾಗಿ ಐ.ಆರ್. ಗಡ್ಡೇಕರ್ ಅವರನ್ನು ಇಲಾಖೆ ನೇಮಿಸಿದ್ದು ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ಬೆಳಗಾಂ ಜಿಲ್ಲೆಯ ಅಥಣಿಯವರಾದ ಯೂನೂಸ್ ಆರ್. ಗಡ್ಡೇಕರ್ (ಐ.ಆರ್. ಗಡ್ಡೇಕರ್‌) ಪಿಎಸ್ಐ 2016 ಬ್ಯಾಚ್‌ನವರು. ಬೈಂದೂರು ಹಾಗೂ ಕುಂದಾಪುರದಲ್ಲಿ ಪ್ರೊಬೇಶನರಿ ಕರ್ತವ್ಯ ನಿರ್ವಹಿಸಿದ ಬಳಿಕ ಕಾಪು ಠಾಣೆಯಲ್ಲಿ 1 ವರ್ಷ, ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಗರ ಠಾಣೆಯಲ್ಲಿ 2 ವರ್ಷ, ಗ್ರಾಮಾಂತರ ಠಾಣೆಯಲ್ಲಿ 2 ವರ್ಷ, ದ.ಕ ಜಿಲ್ಲೆಯ ಸೆನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಇದೀಗಾ ಶಂಕರನಾರಾಯಣ ಪೊಲೀಸ್ ಠಾಣೆ ಪಿಎಸ್ಐ ಆಗಿದ್ದ ನಾಸೀರ್ ಹುಸೇನ್ ಅವರ ಸ್ಥಳಕ್ಕೆ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರು ಆದೇಶಿಸಿದ್ದಾರೆ.

 

Comments are closed.