ಕರಾವಳಿ

ಕುಂದಾಪುರ ತಾಲೂಕಿನಾದ್ಯಂತ ಬಾರೀ‌ ಮಳೆ: ಹಲವೆಡೆ ಕೆರೆಯಂತಾದ ರಾಷ್ಟ್ರೀಯ ಹೆದ್ದಾರಿ, ಸರ್ವೀಸ್ ರಸ್ತೆ!

Pinterest LinkedIn Tumblr

ಕುಂದಾಪುರ: ತಾಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಬಿಡದೇ ಸುರಿಯುತ್ತಿರುವ ಮಳೆ ಗುರುವಾರ ಮಧ್ಯಾಹ್ನದವರೆಗೂ ಮುಂದುವರೆದಿದೆ. ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು ವರ್ಷಧಾರೆಯಿಂದ ಜನಜೀವ ಅಸ್ತವಸ್ಥವಾಗಿದೆ.

ಹೆದ್ದಾರಿ, ಸರ್ವೀಸ್ ರಸ್ತೆ ಕೃತಕ ಕೆರೆ: ರಾತ್ರಿಯಿಡೀ ಹಾಗೂ ಮುಂಜಾನೆಯಿಂದ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಗಳು ಅಕ್ಷರಶಃ ಕೃತಕ ಕೆರೆಯಾಗಿ ಮಾರ್ಪಟ್ಟು ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ. ಕೋಟೇಶ್ವರ, ಅಂಕದಕಟ್ಟೆ, ಕುಂದಾಪುರದ ಟಿ.ಟಿ. ರಸ್ತೆ ಮೊದಲಾದೆಡೆ ಸರ್ವೀಸ್ ರಸ್ತೆಗಳಲ್ಲಿ ಮೊಣಕಾಲೆತ್ತರ ನೀರು ನಿಂತಿರುವ ದೃಶ್ಯ ಕಂಡುಬಂದಿತ್ತು.

Comments are closed.