ಕರಾವಳಿ

ಗಾಂಜಾ ಮಾರಾಟ, ಕ್ರಿಕೆಟ್ ಬೆಟ್ಟಿಂಗ್: ಮೂವರನ್ನು ಬಂಧಿಸಿದ ಹೆಬ್ರಿ ಪೊಲೀಸರು

Pinterest LinkedIn Tumblr

ಉಡುಪಿ: ಗಾಂಜಾ ಮಾರಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಹೆಬ್ರಿ ಪೊಲೀಸರು ಮೂವರು ಆರೋಪಿಗಳನ್ನು ಮೇ. 19ರಂದು ಬೆಳಗಿನ ಜಾವ ಬೆಳ್ಳಂಜೆ ಗ್ರಾಮ ತುಂಬೆಜಡ್ಡು ಎಂಬಲ್ಲಿ ಬಂಧಿಸಿದ್ದಾರೆ.

ತೇಜಸ್‌ ಶೆಟ್ಟಿ, ಪ್ರಜ್ವಲ್ ಗೌಡ, ಪ್ರವೀಣ್‌ ಬಂಧಿತ ಆರೋಪಿಗಳು. ಇವರು ಲಾಭದ ಉದ್ದೇಶದಿಂದ‌ ತುಂಬೆಜೆಡ್ಡು ಎಂಬಲ್ಲಿನ ಮನೆಯೊಂದರ ಪಕ್ಕದ ಕಟ್ಟಡದಲ್ಲಿ ಗಾಂಜಾ ಮಾರಾಟ ಮತ್ತು ಸಂಘಟಿತವಾಗಿ ಕ್ರಿಕೇಟ್ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿರುವ ಬಗ್ಗೆ ಹೆಬ್ರಿ ಪೊಲೀಸರಿಗೆ ಸಿಕ್ಕ ಖಚಿತ ವರ್ತಮಾನದಂತೆ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ 89,000ರೂ. ನಗದು ಹಣ, 8 ಮೊಬೈಲ್ ಪೋನ್‌ಗಳು, 7 ಎಟಿಎಂ ಕಾರ್ಡ್‌ಗಳು, 3 ಸಿಮ್ ಕಾರ್ಡ್‌ಗಳು, 2 ನೋಟ್ ಪುಸ್ತಕಗಳು ಮತ್ತು 21 ಗ್ರಾಂ ಗಾಂಜಾವನ್ನು ಪೊಲೀಸರರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.