ಕರ್ನಾಟಕ

ಭಾಷಣದ ವೇಳೆ ಬಿಜೆಪಿಗರ ಪ್ರತಿಭಟನೆ: ಹೆಚ್ಚುವರಿ ಎಸ್‌ಪಿ ವಿರುದ್ಧ ಗರಂ ಆಗಿ ವೇದಿಕೆಯಲ್ಲೇ ಕೈ ಎತ್ತಿದ ಸಿಎಂ ಸಿದ್ದರಾಮಯ್ಯ!

Pinterest LinkedIn Tumblr

ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಮೇಲೆಯೇ ಧಾರವಾಡದ ಹೆಚ್ಚುವರಿ ಎಸ್‌ಪಿ ನಾರಾಯಣ ಭರಮನಿ ಅವರತ್ತ ಸಿಎಂ ಕೈ ಎತ್ತಿದ್ದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಬೆಲೆ ಏರಿಕೆ ವಿರೋಧಿಸಿ ಸೋಮವಾರ ಕಾಂಗ್ರೆಸ್‌ ಪ್ರತಿಭಟನಾ ಸಭೆ ಆಯೋಜಿಸಿತ್ತು. ಸಿಎಂ ಮಾತನಾಡುವಾಗ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟಿಸಿದರು. ಪಾಕ್ ಜೊತೆ ಯುದ್ಧ ಅನಿವಾರ್ಯವಲ್ಲ ಎಂಬ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಪಟ್ಟಿ ಪ್ರದರ್ಶಿಸಿದ್ದಾರೆ.

ಸಿಎಂ ಭಾಷಣ ಮಾಡುವಾಗ ಕಪ್ಪು ಪಟ್ಟಿಯನ್ನು ತೋರಿಸಿ ಪ್ರತಿಭಟಿಸಿದ್ದು ತನ್ನ ಮುಂಭಾಗವೇ ಪ್ರತಿಭಟನೆ ನೋಡಿ ಸಿಎಂ ಒಂದು ಕ್ಷಣ ಭಾಷಣ ಮಾಡುವುದನ್ನು ನಿಲ್ಲಿಸಿದರು. ಬಳಿಕ ಯಾರದು ಎಸ್‌ಪಿ ಎಂದು ಹೇಳಿ ವೇದಿಕೆಗೆ ಬರುವಂತೆ ಹೇಳಿದ್ದಾರೆ. ಹೆಚ್ಚುವರಿ ಎಸ್‌ಪಿ ಬರುತ್ತಿದ್ದಂತೆ ಏನ್ರೀ ಇದು, ಏನು ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿ ಕೈ ಎತ್ತಿ ಸಿಟ್ಟು ಹೊರಹಾಕಿದ್ದಾರೆ. ನಂತರ ಸಚಿವ ಎಂಬಿ ಪಾಟೀಲ್‌ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿದರು. ಈ ವಿಡಿಯೋ ವೈರಲ್ ಆಗಿದ್ದು ಬಾರೀ ಠೀಕೆ ವ್ಯಕ್ತವಾಗಿದೆ.

Comments are closed.