ಉಡುಪಿ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯಾವುದೇ ಶುಲ್ಕ ಪಾವತಿಸಿಕೊಳ್ಳದೇ ದರಖಾಸ್ತು ಪೋಡಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ತಹಶೀಲ್ದಾರರ ಕಛೇರಿಯಿಂದ ಅನುಬಂಧ-1 ರಂತೆ ದರ್ಖಾಸ್ತು ಮಂಜೂರಿದಾರರ ಮಾಹಿತಿ ಸ್ವೀಕೃತಿಯಾದಂತೆ, ಭೂಮಾಪಕರು ಅಳತೆ ಕೆಲಸಕ್ಕೆ ಆಗಮಿಸಲಿದ್ದು, ಸಂಬಂಧಪಟ್ಟ ಮಂಜೂರಿದಾರರು ಭೂಮಾಪಕರು ಸ್ಥಳಕ್ಕೆ ಬಂದಾಗ ಕಡ್ಡಾಯವಾಗಿ ಹಾಜರಿದ್ದು, ಮಂಜೂರಾದ ಸ್ಥಳದ ಗಡಿಗಳನ್ನು ತೋರಿಸಿ, ಅಳತೆಯಾದಂತೆ ಗಡಿಗಳಿಗೆ ಗಡಿ ಕಲ್ಲುಗಳನ್ನು ಹಾಕಿಸಲು ಸೂಕ್ತ ಕ್ರಮವಹಿಸಬೇಕು.
ಭೂಮಾಪಕರ ಅಳತೆ ಸಮಯದಲ್ಲಿ ಮಂಜೂರಿದಾರರು ಹಾಜರಿಲ್ಲದೇ ಇದ್ದಲ್ಲಿ ಸ್ಥಳದಲ್ಲಿನ ಮಾಹಿತಿಯಂತೆ ಅಳತೆ ಕೆಲಸ ನಡೆಸಲಾಗುವುದು ಅಥವಾ ದರಖಾಸ್ತು ಮಂಜೂರಾತಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭೂದಾಖಲೆಗಳ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
Comments are closed.