ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ನಿರ್ಮಿಸಿರುವ ಶ್ರೀ ಉಮಾ ಮಹೇಶ್ವರ, ಶ್ರೀ ಶಿವ ಪಾರ್ವತಿ, ಶ್ರೀ ಗೌರಿಶಂಕರ ನೂತನ ಕಲ್ಯಾಣ ಮಂಟಪಗಳ ಸಮುಚ್ಚಯದ ಉದ್ಘಾಟನೆಯನ್ನು ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ವಿವಿಧ ಹುದ್ದೆಗಳಿಗೆ ಏರಿದರೂ, ಶ್ರೀ ಕ್ಷೇತ್ರಕ್ಕೆ ಬಂದಾಗ ಮಂಜುನಾಥ ಸ್ವಾಮಿಯ ಭಕ್ತನಾಗಿ ಬರುತ್ತೇನೆ. ಪ್ರತಿ ವರ್ಷ ತಪ್ಪದೇ ಮಾತು ಬಿಡ ಮಂಜುನಾಥನ ದರ್ಶನಕ್ಕೆ ನನ್ನ ಕುಟುಂಬದ ಸದಸ್ಯರೆಲ್ಲರೂ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ.
ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಚತುರ್ವಿಧದಾನ ಪರಂಪರೆಯಿಂದ ಈ ದೇವಸ್ಥಾನ ಹೆಸರುವಾಸಿಯಾಗಿದೆ. ಮರಕ್ಕೆ ಬೇರಿದ್ದ ಹಾಗೆ, ಮನುಷ್ಯನಿಗೆ ನಂಬಿಕೆ. ನಂಬಿಕೆಯಿಂದ, ಮೋಕ್ಷಸಾಧನೆಗಾಗಿ ಜನರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಧರ್ಮ ನೂರಾದರೂ ತತ್ವವೊಂದೇ, ನಾಮ ಹಲವಾದರೂ ದೈವವೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Comments are closed.