ಕರಾವಳಿ

ವಾಟ್ಸಾಪ್ ಗ್ರೂಪ್‌‌ಮಾಡಿಕೊಂಡು ಕೋಳಿ ಲಕ್ಕಿ‌ಡ್ರಾ ನೀಡುವುದಾಗಿ ಹಣ ಸಂಗ್ರಹ: ಆರೋಪಿಯ ವಿಚಾರಣೆ, ಸೊತ್ತುಗಳು ವಶ

Pinterest LinkedIn Tumblr

ಉಡುಪಿ: ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಲಕ್ಕಿ‌ಡ್ರಾ ಮೂಲಕ ಕೋಳಿ‌ಗಳನ್ನು ಬಹುಮಾನವಾಗಿ ನೀಡುವುದಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ಉಡುಪಿಯಲ್ಲಿ ವರದಿಯಾಗಿದೆ.

ಕಾಪು ಗ್ರಾಮದ ಶಿರ್ವ ನಿವಾಸಿ ಮನೋಜ್ (31) ಆರೋಪಿ. ಈತನಿಂದ 5,600 ರೂ. ನಗದು ಹಣ, 10 ಸಾವಿರ ರೂಪಾಯಿ ಮೌಲ್ಯದ ಮೊಬೈಲ್‌ ಫೋನ್‌, 5 ಸಾವಿರ ಮೌಲ್ಯದ ಮೊಬೈಲ್‌ ಫೋನ್‌, 4 ಲಕ್ಷ ಮೌಲ್ಯದ ಕಾರು, ಟೋಕನ್‌ ಕಾಯಿನ್‌ಗಳು, ಪ್ಲಾಸ್ಟಿಕ್‌ ಜಾರ್‌ ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ: ಉಡುಪಿ ಸೆನ್ ಠಾಣೆ ಉಪನಿರೀಕ್ಷಕ ಪವನ್ ನಾಯಕ್ ಅವರಿಗೆ ಬಂದ ಖಚಿತ ಮಾಹಿತಿಯಂತೆ ಕಾಪು ತಾಲ್ಲೂಕಿನ ಶಿರ್ವ ಗ್ರಾಮದ ಶಿರ್ವಾ ಪೇಟೆಯ ಸಮೀಪ ವ್ಯಕ್ತಿಯೋರ್ವನು ತನ್ನ ಸ್ವಂತ ಲಾಭಕ್ಕೋಸ್ಕರ ಮೊಬೈಲ್ ಪೋನ್ ನಲ್ಲಿ ‘ಎಂ.ಜೆ
ಕಟ್ಟದ ಕೋರಿ ಲಕ್ಕಿ ಡ್ರಾ’ ಎಂಬ 350 ಜನರಿರುವ ವಾಟ್ಸಾಫ್ ಗ್ರೂಪ್ ಮಾಡಿಕೊಂಡು ಗ್ರೂಪ್‌ನಲ್ಲಿರುವ ಸದಸ್ಯರಿಂದ ಹಣವನ್ನು ಸಂಗ್ರಹಿಸಿ ಕೋಳಿಗಳನ್ನು ಬಹುಮಾನವಾಗಿರಿಸಿ ಲಕ್ಕಿ ಡ್ರಾ ನಡೆಸಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಬಗ್ಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ವಿಚಾರಣೆ‌ ನಡೆಸಿದ್ದಾರೆ.

ಈ ಬಗ್ಗೆ ಉಡುಪಿ‌ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.