ಕರಾವಳಿ

ಮತ್ಸ್ಯ ಸಮೃದ್ಧಿ, ನಿರಾತಂಕ ಮೀನುಗಾರಿಕೆಗೆ ಪ್ರಾರ್ಥನೆ; ಗಂಗೊಳ್ಳಿಯಲ್ಲಿ ಸಮುದ್ರರಾಜನಿಗೆ ಹಾಲು, ಸೀಯಾಳ, ಫಲಪುಷ್ಪ ಅರ್ಪಣೆ!

Pinterest LinkedIn Tumblr

ಕುಂದಾಪುರ: ಮತ್ಸ್ಯ ಸಮೃದ್ಧಿ ಉಂಟಾಗಲಿ, ಮೀನುಗಾರಿಕೆಗೆ ತೆರಳಿದಾಗ ಯಾವುದೇ ಅಡ್ಡಿ ಆತಂಕಗಳು ಎದುರಾಗದಿರಲಿ ಎಂದು ಗಂಗಾ ಮಾತೆ ಅನುಗ್ರಹ ಕೋರಿ, ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಬುಧವಾರ ಸಮುದ್ರಪೂಜೆ ನೆರವೇರಿಸಿದರು.

ಗಂಗೊಳ್ಳಿಯ ಅರ್ಚಕ ವೇ|ಮೂ| ವಿಟ್ಠಲ್‌ದಾಸ್ ಭಟ್ ಹಾಗೂ ಅಜಿತ್ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿಗಳು ನೆರವೇರಿತು.

ಬಳಿಕ ಪರ್ಸಿನ್ ಬೋಟ್, ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲರ್ ಬೋಟ್‌ಗಳ ಸಂಘದ ಸದಸ್ಯರೆಲ್ಲ ಸಮುದ್ರರಾಜನಿಗೆ ಹಾಲು, ಸೀಯಾಳ, ಫಲಪುಷ್ಪವನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಪರ್ಸಿನ್ ಬೋಟುಗಳ ಮೀನುಗಾರರ ಸಂಘದ ಅಧ್ಯಕ್ಷ ಪ್ರಭಾಕರ ಕುಂದರ್, ತ್ರಿಸೆವೆಂಟಿ ಬೋಟುಗಳ ಮೀನುಗಾರರ ಸಂಘದ ಅಧ್ಯಕ್ಷ ಸೌಪರ್ಣಿಕಾ ಬಸವ ಖಾರ್ವಿ, ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಗಣೇಶ್ ಖಾರ್ವಿ, ಮೀನುಗಾರರ ಮುಖಂಡರು, ಮೀನುಗಾರರು ಉಪಸ್ಥಿತರಿದ್ದರು.

Comments are closed.