ಕರಾವಳಿ

ಬೈಂದೂರಿನ ಶಿರೂರು ಬಳಿ ಗೋಕಳ್ಳತನ ಪ್ರಕರಣ: ಇಬ್ಬರ ಸೆರೆ, ಕಾರುಗಳು ವಶಕ್ಕೆ!

Pinterest LinkedIn Tumblr

ಕುಂದಾಪುರ: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಹೊಟೇಲೊಂದರ ಎದುರುಗಡೆ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರದ ಕೋಡಿ ನಿವಾಸಿಗಳಾದ ಅಬ್ದುಲ್ ಸಮಾದ್ (27), ಅಬ್ದುಲ್ ರೆಹಮಾನ್ (25) ಎಂಬಿಬ್ಬರು ಆರೋಪಿಗಳನ್ನು ಕೋಟೇಶ್ವರ-ಹಾಲಾಡಿ ರಸ್ತೆಯ ಬಳಿ ವಶಕ್ಕೆ ಪಡೆದು ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಎರಡು ಕಾರುಗಳು, ಮೊಬೈಲ್‌ಗಳು, ಕೃತ್ಯಕ್ಕೆ ಬಳಸಿದ ಚೂರಿಯನ್ನು ವಶಪಡಿಸಿಕೊಂಡಿದ್ದು ಕಾರುಗಳ ಅಂದಾಜು ಮೌಲ್ಯ ಒಟ್ಟು 9 ಲಕ್ಷ ರೂಪಾಯಿ ಆಗಿದೆ.

(ವಶಪಡಿಸಿಕೊಂಡ ಕಾರುಗಳು, ಪೊಲೀಸರ ತಂಡ)

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ದಲಿಂಗಪ್ಪ ಹಾಗೂ ಪರಮೇಶ್ವರ ಹೆಗಡೆ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಬೈಂದೂರು ವೃತ್ತನಿರೀಕ್ಷಕ ಸವೀತ್ರ ತೇಜ್ ನಿರ್ದೇಶನದಲ್ಲಿ ಬೈಂದೂರು ಠಾಣೆ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ತಿಮ್ಮೇಶ್ ಬಿ.ಎನ್ ತಂಡವನ್ನು ರಚಿಸಿ, ಜಿಲ್ಲಾ ಸಿ.ಡಿ.ಆರ್ ವಿಭಾಗದ ತಾಂತ್ರಿಕ ಸಿಬ್ಬಂದಿಗಳ ಸಹಕಾರದಲ್ಲಿ, ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಪ್ರಿನ್ಸ್ ಕೆ.ಜೆ., ಸುಜಿತ್‌ ಕುಮಾರ್, ಮಾಳಪ್ಪ ದೇಸಾಯಿ, ನವೀನ್ ಕುಮಾರ್, ಸೂರ ನಾಯ್ಕ, ಚಂದ್ರ ಹಾಗೂ ಜಿಲ್ಲಾ ಸಿ.ಡಿ.ಆರ್ ವಿಭಾಗದ ತಾಂತ್ರಿಕ ಸಿಬ್ಬಂದಿ ದಿನೇಶ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

Comments are closed.