ಕರಾವಳಿ

ಹಿರಿಯಡ್ಕ ಜೈಲಿನಲ್ಲಿದ್ದ ಆರೋಪಿಯನ್ನು ನೋಡಲು ಬಂದಾಗ ಬಿಸ್ಕೇಟ್, ಹಣ್ಣಿನೊಂದಿಗೆ ಗಾಂಜಾ ತಂದ ಇಬ್ಬರ ವಿರುದ್ಧ ಪ್ರಕರಣ

Pinterest LinkedIn Tumblr

ಉಡುಪಿ: ಜಿಲ್ಲೆಯ ಹಿರಿಯಡ್ಕ ಸಬ್ ಜೈಲಿನಲ್ಲಿ ವಿಚರಣಾ ಬಂಧಿಯಾಗಿದ್ದವನನ್ನು ನೋಡಲು ಬಂದ ಇಬ್ಬರು ಆರೋಪಿಗಳು ಬಿಸ್ಕಿಟ್, ಹಣ್ಣುಗಳ ಜೊತೆಗೆ ಗಾಂಜಾ ಪ್ಯಾಕೇಟ್ ತಂದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

ಹಿರಿಯಡ್ಕ ಜೈಲಿನಲ್ಲಿದ್ದ ರೇವುನಾಥ ಅಲಿಯಾಸ್ ಪ್ರೇಮನಾಥ (23) ಈತನ ಸಂದರ್ಶನಕ್ಕೆ ಮೇ.20 ರಂದು ಸಂಜೆಗೆ ಆತನ ಸ್ನೇಹಿತರಾದ ಸುದೀಶ ಮತ್ತು ವರುಣ ಎನ್ನುವರು ಹಣ್ಣುಗಳು, ಬಿಸ್ಕೇಟ್‌ಗಳನ್ನು ತಂದಿದ್ದು ಮುಖ್ಯದ್ವಾರದಲ್ಲಿ ದ್ವಾರ ಪಾಲಕನಾಗಿ ಕರ್ತವ್ಯಕ್ಕೆ ಇದ್ದ ಸಂತೋಷ ದಗಾಟೆ ಅವರ ಬಳಿ ಕೊಟ್ಟು, ವಿಚಾರಣಾ ಬಂದಿ ರೇವುನಾಥರವರಿಗೆ ಕೊಡಲು ತಿಳಿಸಿ, ನಂತರ ಅಲ್ಲಿಂದ ವಿಚಾರಣಾ ಬಂದಿಯೊಂದಿಗೆ ಮಾತನಾಡಲು ಸಂದರ್ಶನ ಕೊಠಡಿಗೆ ಹೋಗಿ ಮಾತನಾಡಿ ಕಾರಾಗೃಹದಿಂದ ಹೊರ ನಡೆದಿದ್ದರು. ನಂತರ ವಿಚಾರಣಾ ಬಂದಿಯ ಸ್ನೇಹಿತರು ತಂದಿದ್ದ ವಸ್ತುಗಳನ್ನು ಕಾರಗೃಹದ ಸಿಬ್ಬಂದಿಗಳಾದ ಸಹಾಯಕ ಜೈಲರ್, ದ್ವಾರಪಾಲಕರು ಮತ್ತು ದ್ವಾರ ಸಹಾಯಕರು ಪರಿಶೀಲಿಸಿದಾಗ ಬಿಸ್ಕೇಟ್ ಮತ್ತು ಹಣ್ಣುಗಳ ಮಧ್ಯದಲ್ಲಿ ಗಾಂಜಾದಂತಹ ಸೊಪ್ಪು ಇರುವುದಾಗಿ ಕಂಡುಬಂದಿದ್ದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಿದ್ದರಾಮ ಪಾಟೀಲ ಅವರಿಗೆ ತಿಳಿಸಿದ್ದಾರೆ. ಅವರು ಪರಿಶೀಲಿಸಿದಾಗ ಬ್ಯಾಗ್ ನಲ್ಲಿ ಹಣ್ಣು ಮತ್ತು ಬಿಸ್ಕೇಟ್ ನ ಮದ್ಯ ಪ್ಲಾಸ್ಟಿಕ್ ತೊಟ್ಟೆ ಯಲ್ಲಿ 10 ರಿಂದ 15 ಗ್ರಾಂ ನಷ್ಟು ಗಾಂಜಾ ಸೊಪ್ಪು ಕಂಡು ಬಂದಿದ್ದು ನಿಷೇದಿತ ವಸ್ತುಗಳನ್ನು ಬಿಸ್ಕೇಟ್ ಹಾಗೂ ಹಣ್ಣುಗಳ ಮದ್ಯದಲ್ಲಿ ಸೇರಿಸಿ ಕಾರಾಗೃಹ ಒಳಗಡೆ ನುಸುಳಿಸಲು ಪ್ರಯತ್ನಿಸಿದ ವ್ಯಕ್ತಿಗಳ ವಿರುದ್ದ ಪ್ರಕರಣ ‌ದಾಖಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2024 ಕಲಂ: 42 ಕರ್ನಾಟಕ ಕಾರಾಗೃಹ ಅಧಿನಿಯಮ (ತಿದ್ದುಪಡಿ) ಕಾಯಿದೆ 2022 ಹಾಗೂ (c) ,20(b) ii(A) ಎನ್‌ ಡಿಪಿಎಸ್‌ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Comments are closed.