ಕರ್ನಾಟಕ

ಕರ್ನಾಟಕ ಬಿಜೆಪಿ ಮುಖಂಡರ ಗೂಂಡಾಗಿರಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿಲ್ಲವೇ?: ಕಾಂಗ್ರೆಸ್ ಕಿಡಿ

Pinterest LinkedIn Tumblr

ಬೆಂಗಳೂರು: ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಜೂಜುಕೋರರನ್ನು ಬಂಧಿಸಿದ್ದಕ್ಕೆ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಯವರು ಠಾಣೆಗೆ ನುಗ್ಗಿ ಪೊಲೀಸರಿಗೆ ಧಮಕಿ ಹಾಕಿದ್ದರು. ಈಗ ಬಿಜೆಪಿಯ ಅಕ್ರಮ ದಂಧೆಕೋರರನ್ನು ಬಂಧಿಸಿದ್ದಕ್ಕೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಧಮಕಿ ಹಾಕಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಜೆಪಿ ವಿರುದ್ಧ ತೀವೃ ವಾಗ್ದಾಳಿ ನಡೆಸಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡುವ, ಪೊಲೀಸರ ನೈತಿಕತೆ ಕಸಿಯುವ ಬಿಜೆಪಿ ನಾಯಕರಿಂದ ಕಾನೂನು ಸುವ್ಯವಸ್ಥೆಯ ಪಾಠ ಕಲಿಯುವ ಅಗತ್ಯವಿಲ್ಲ. ಆರ್. ಅಶೋಕ್ ಅವರೇ, ಕಳ್ಳಕಾಕರಿಗೆ ಬೆಂಬಲಿಸದಂತೆ, ಕಾನೂನು ಪಾಲನೆ ಮಾಡುವಂತೆ, ಪೊಲೀಸರಿಗೆ ಧಮಕಿ ಹಾಕದಂತೆ ನಿಮ್ಮ ಶಾಸಕರಿಗೆ ಪಾಠ ಹೇಳಿ, ನಂತರ ಬೇರೆ ಮಾತಾಡಿ.
ಒಂದೆಡೆ ಕಾನೂನು ಸುವ್ಯವಸ್ಥೆಯನ್ನು ಕಠಿಣಗೊಳಿಸಿದ್ದಕ್ಕೆ ಪೊಲೀಸರ ಮೇಲೆ ಎಗರುವುದು, ಮತ್ತೊಂದೆಡೆ ರಕ್ಷಣೆ ಇಲ್ಲ ಎಂದು ಬಾಯಿ ಬಡಿದುಕೊಳ್ಳುವುದು.
ಇದು ಬಿಜೆಪಿಯ ಡಬಲ್ ಸ್ಟ್ಯಾಂಡರ್ಡ್ ನೀತಿ! ಎಂದಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮ ದಂಧೆಕೋರರು ಹದ್ದು ಮೀರಿದ್ದರು, ಬಿಜೆಪಿಯ ರೌಡಿ ಮೋರ್ಚಾದಿಂದಾಗಿ ಕ್ರಿಮಿನಲ್ ಗಳು ಕಾನೂನಿನ ಭಯ ಕಳೆದುಕೊಂಡಿದ್ದರು. ಆದರೆ ನಮ್ಮ ಸರ್ಕಾರ ಬಿಜೆಪಿ ಅವಧಿಯಲ್ಲಿ ಹದ್ದು ಮೀರಿದ್ದವರನ್ನು ಕಠಿಣ ಕಾನೂನು ಕ್ರಮದ ಮೂಲಕ ತಹಬದಿಗೆ ತರಲಿದೆ.

ಬೆಳ್ತಂಗಡಿಯಲ್ಲಿ ಬಿಜೆಪಿ ಪದಾಧಿಕಾರಿಯ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆದು ಕಾನೂನು ಕ್ರಮ ಜರುಗಿಸಿದ ಪೊಲೀಸರ ಮೇಲೆ ಬಿಜೆಪಿಯ ರೌಡಿ ಎಂಎಲ್ಎ ಹರೀಶ್ ಪೂಂಜಾ ದಬ್ಬಾಳಿಕೆ ನಡೆಸಿದ್ದಾರೆ. ಒಬ್ಬ ಶಾಸಕನ ಕೆಲಸ ಅಕ್ರಮಕೋರರನ್ನು ರಕ್ಷಿಸುವುದಾ ಅಥವಾ ಜನರ ಆಶೋತ್ತರಗಳನ್ನು ಈಡೇರಿಸುವುದಾ BJP Karnataka ?

ಕಾನೂನು ಸುವ್ಯವಸ್ಥೆಯ ಬಗ್ಗೆ ಪುಂಖಾನುಪುಂಖವಾಗಿ ಆರೋಪ ಮಾಡುವ ಬಸವರಾಜ ಬೊಮ್ಮಾಯಿ ಅವರೇ, ಆರ್. ಅಶೋಕ ಅವರೇ, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ದೌರ್ಜನ್ಯ ಎಸಗುವ ನಿಮ್ಮ ಶಾಸಕನ ಕಾನೂನು ವಿರೋಧಿ ನಡೆಯ ಬಗ್ಗೆ ನಿಮ್ಮ ಸಹಮತವಿದೆಯೇ? ನಿಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಅಕ್ರಮಗಳನ್ನು ಪಾಲನೆ, ಪೋಷಣೆ ಮಾಡಿದ್ದರ ಪರಿಣಾಮ ಅಕ್ರಮಗಳು ಮಿತಿ ಮೀರಿದ್ದವಲ್ಲವೇ?ಕ್ರಿಮಿನಲ್ ಗಳಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಬೆಂಬಲಿಸುವ ಬಿಜೆಪಿಗೆ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನೆ ಮಾಡುವ ನೈತಿಕತೆ ಇಲ್ಲ ಎಂದಿದ್ದಾರೆ.

ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಸವರಾಜ್ ಬೊಮ್ಮಾಯಿ, ಆರ್. ಅಶೋಕ್ ಅವರೇ, ಕಲ್ಲು ಕಳ್ಳರ ರಕ್ಷಣೆಗೆ ಪೋಲೀಸರ ಮೇಲೆಯೇ ಗೂಂಡಾಗಿರಿ ನಡೆಸಿರುವ ನಿಮ್ಮ ಶಾಸಕ ಹರೀಶ್ ಪೂಂಜಾ ವರ್ತನೆ ಬಗ್ಗೆ ಏನಂತಿರೀ?

ಕರ್ನಾಟಕ ಬಿಜೆಪಿ ಮುಖಂಡರ ಗೂಂಡಾಗಿರಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿಲ್ಲವೇ? ಇವರಿಗೆ ಏನು ಶಿಕ್ಷೆ ಕೊಡಬೇಕು ಅಂತ ನೀವೇ ಸಲಹೆ ಕೊಡಿ.

“ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ” ಎಂಬಂತಿದೆ ನಿಮ್ಮ ವರ್ತನೆ. ಮೊದಲು ನಿಮ್ಮ ಮನೆ ಶುದ್ಧಿ ಮಾಡಿಕೊಂಡು ನಂತರ ಬೇರೆಯವರಿಗೆ ಬುದ್ಧಿ ಹೇಳಿ.

Comments are closed.