ಕರಾವಳಿ

ಕುಂದಾಪುರದಲ್ಲಿ ಸಿಪಿಎಂ ರಾಜಕೀಯ ಸಮಾವೇಶ | ಕಾರ್ಮಿಕರಿಗೆ ಹಲವು ಭದ್ರತೆ ಒದಗಿಸುವ ಕಾನೂನುಗಳನ್ನು ಅಂಬೇಡ್ಕರ್ ರೂಪಿಸಿದ್ರು: ಕೆ. ಮಹಾಂತೇಶ್

Pinterest LinkedIn Tumblr

ಕುಂದಾಪುರ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾರ್ಮಿಕರಿಗೆ ಹಲವು ಭದ್ರತೆ ಒದಗಿಸುವ ಕಾನೂನುಗಳನ್ನು ರೂಪಿಸಿದ್ದರು ಎಂದು ಸಿಪಿಎಂ ಪಕ್ಷದ ರಾಜ್ಯ ಮುಖಂಡರಾದ ಕೆ.ಮಹಾಂತೇಶ್ ಅವರು ಹೇಳಿದರು.

ಅವರು ರವಿವಾರ ಕುಂದಾಪುರದ ಹೆಂಚು ಕಾರ್ಮಿಕರ ಭವನದಲ್ಲಿ ಸಿಪಿಎಂ ಕುಂದಾಪುರ ವಲಯ ಸಮಿತಿ ನೇತೃತ್ವದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಮಾತನಾಡಿದರು.

ಸಂವಿಧಾನ ರಚನೆಯಾದ ನಂತರ ನಮಗೆ ಹೋರಾಟದ ಹಕ್ಕು,ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಸಿಕ್ಕಿದೆ ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಹತ್ತು ವರ್ಷಗಳಿಂದ ಜನರ ಹಕ್ಕಿನ ಮೇಲೆ ದಾಳಿ ನಡೆಸುವ ವ್ಯವಸ್ಥಿತ ಪ್ರಯತ್ನ ನಡೆಸುತ್ತಿದ್ದಾರೆ ಅದಕ್ಕಾಗಿ ಅವರು ಸಂವಿಧಾನವೇ ಬದಲಿಸುವ ಮಾತುಗಳನ್ನಾಡುತ್ತಾರೆ ನಮ್ಮ ಹಕ್ಕುಗಳು ಉಳಿಯಬೇಕಾದರೆ ಬಿಜೆಪಿಯನ್ನು ತಿರಸ್ಕರಿಸಿ ಜಾತ್ಯಾತೀತ ಶಕ್ತಿಗಳನ್ನು ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು.

ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ್ ಕಲ್ಲಾಗರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಜನ ವಿರೋಧಿ ನೀತಿ ಜಾರಿ ಮಾಡುವ ಸರ್ಕಾರಗಳನ್ನು ಬದಲಿಸುವ ಅವಕಾಶಗಳಿವೆ ಅಂತಹ ಅವಕಾಶವನ್ನು ಕಾರ್ಮಿಕರು ಬಳಸಿಕೊಂಡು ದೇಶದ ಸೌಹಾರ್ದತೆ ಹಾಳು ಮಾಡುತ್ತಿರುವ ಬಿಜೆಪಿ ಸೋಲಿಸುವುದು ಅಗತ್ಯ ಎಂದರು.

ಸಿಪಿಎಂ ಪಕ್ಷದ ಹಿರಿಯ ಮುಖಂಡ ಕೆ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಪಕ್ಷದ ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ ಸ್ವಾಗತಿಸಿ, ಪಕ್ಷದ ಮುಖಂಡ ಚಂದ್ರಶೇಖರ ವಿ. ವಂದಿಸಿದರು.

Comments are closed.