ಕರಾವಳಿ

ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ 1 ಲಕ್ಷ 30 ಸಾವಿರ ಮೌಲ್ಯದ ಸುಮಾರು 13 ಮೊಬೈಲ್‌ಗಳು ವಶಕ್ಕೆ

Pinterest LinkedIn Tumblr

ಕುಂದಾಪುರ: ಕುಂದಾಪುರ ಪೊಲೀಸ್ ವ್ಯಾಪ್ತಿಯಲ್ಲಿ ಜನವರಿಯಿಂದ ಮಾರ್ಚ್ ಕೊನೆತನಕ ಸಾರ್ವಜನಿಕರು ಕಳೆದುಕೊಂಡಿರುವ ಒಟ್ಟು 13 ಮೊಬೈಲ್ ಮೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಕುಂದಾಪುರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು ಈ ಮೊಬೈಲ್‌ಗಳನ್ನು ಅದರ ಮಾಲೀಕರಿಗೆ ಎ.11 (ಗುರುವಾರ) ಕುಂದಾಪುರ ಠಾಣೆಯಲ್ಲಿ ಹಸ್ತಾಂತರಿಸಲಾಗುತ್ತದೆ.

ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನುಗಳನ್ನು ಸಿ.ಇ.ಐ.ಆರ್. ಪೋರ್ಟಲ್ ನಲ್ಲಿ ನಮೂದಿಸಿದ್ದಲ್ಲಿ ಪೊಲೀಸರು ಪತ್ತೆ ಮಾಡಲು ಅನುಕೂಲವಾಗುತ್ತದೆ ಅಲ್ಲದೇ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಆದುದರಿಂದ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳ ವಿವರಗಳನ್ನು ಈ ಪೋರ್ಟಲ್ ನಲ್ಲಿ ದಾಖಲಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು 53 ಮೊಬೈಲ್‌ಗಳನ್ನು ಸಿ.ಇ.ಐ.ಆರ್ ತಂತ್ರಾಂಶದ ಮೂಲಕ ಪತ್ತೆಹಚ್ಚಿ ಅದರ ಮಾಲೀಕರಿಗೆ ಈಗಾಗಲೇ ನೀಡಲಾಗಿದ್ದು ಉಡುಪಿ ಎಸ್ಪಿಯವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ. ಸಿದ್ಧಲಿಂಗಪ್ಪ, ಪರಮೇಶ್ವರ ಹೆಗಡೆ, ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಯು ಬೆಳ್ಳಿಯಪ್ಪ ನಿರ್ದೇಶನದಂತೆ ಕುಂದಾಪುರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಯು.ಬಿ. ನಂದಕುಮಾರ್‌ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾ ಉಪನಿರೀಕ್ಷಕರಾದ ವಿನಯ್ ಎಂ ಕೊರ್ಲಹಳ್ಳಿ, ಪ್ರಸಾದ್ ಕುಮಾರ್ ಕೆ. ಹಾಗೂ ಸಿಬ್ಬಂದಿಗಳಾದ ಸಿದ್ದಪ್ಪ ಸಕನಳ್ಳಿ, ಮಾರುತಿ ನಾಯ್ಕ ತಾಂತ್ರಿಕ ಸಿಬ್ಬಂದಿ ಅಶ್ವಿನ್ ಕುಮಾರ್‌ ಭಾಗವಹಿಸಿದ್ದರು.

Comments are closed.