ಕರಾವಳಿ

ದೇಶದ ಜನತೆ ರಕ್ಷಣೆಯಾಗಲು ಬಿಜೆಪಿ ಸೋಲಿಸಬೇಕು: ಕೆ. ಪ್ರಕಾಶ್

Pinterest LinkedIn Tumblr

ಬೈಂದೂರು: ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ ನೇತೃತ್ವದ ಎನ್.ಡಿ.ಎ ಜನರ ಆದಾಯ ಮೇಲೆ ಹೊಡೆತ ನೀಡುವ ಅಪಾಯಕಾರಿ ಆರ್ಥಿಕ ನೀತಿಗಳನ್ನು ಜಾರಿ ಮಾಡುತ್ತಿದೆ. ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತ ಅವಧಿಯಲ್ಲಿ ಜನರು ಕಟ್ಟಿ ಬೆಳೆಸಿದ ಸಾರ್ವಜನಿಕ ಸಂಸ್ಥೆಗಳು ಈ ದೇಶದ ದೊಡ್ಡ ಬಂಡವಾಳಗಾರರಿಗೆ ಮಾರಾಟ ಮಾಡುವ ನೀತಿ ವೇಗವಾಗಿ ಜಾರಿ ಮಾಡುತ್ತಿದೆ.ದೇಶದ ಎಲ್ಲಾ ರಾಷ್ಟೀಯ ಹೆದ್ದಾರಿಗಳನ್ನು ಖಾಸಗೀಯವರಿಗೆ ಮಾರಾಟ ಮಾಡಲು ಮುಂದಾಗಿದೆ.
ಈ ನೀತಿಗಳು ದೇಶದ ಜನರ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ. ದೇಶ ಎಂದರೆ ಕೇವಲ ಭೂಪಟವಲ್ಲ ಅಲ್ಲಿ ವಾಸಿಸುವ ಜನರು ಅವರನ್ನು ರಕ್ಷಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ ಆದರೆ ಮೋದಿ ಆಡಳಿತದಲ್ಲಿ ಜನರ ರಕ್ಷಣೆ ಕೆಲಸ ಆಗುತ್ತಿಲ್ಲ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಮ್ರೇಡ್ ಕೆ. ಪ್ರಕಾಶ್ ಹೇಳಿದ್ದಾರೆ.

ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹೆಮ್ಮಾಡಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ನಡೆದ ಸಿಪಿಎಂ ಪಕ್ಷದ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕರೋನದ ಸಂಕಷ್ಟದ ಕಾಲದಲ್ಲಿಯೂ ಜನರು ಹುಳಗಳಂತೆ ಸಾಯುತ್ತಿದ್ದರೂ ಅವರಿಗೆ ರಕ್ಷಣೆ ಕೊಡುವ ಬದಲಾಗಿ ಲಸಿಕೆ ತಯಾರು ಮಾಡುವಾಗಲೂ ಖಾಸಗೀ ವ್ಯಕ್ತಿಗಳನ್ನು ಬೆಳೆಸಲು ಅವಕಾಶ ಬಳಸಿಕೊಳ್ಳಲಾಯಿತು ಲಸಿಕೆ ತಯಾರು ಮಾಡಿದ ವ್ಯಕ್ತಿ ಇಂದು ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡುವಂತೆ ಮಾಡಿದ್ದು ಮೋದಿ ಸಾಧನೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಸಿಪಿಎಂ ಪಕ್ಷದ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ದೇಶದ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಬಿಜೆಪಿ ಸೋಲಿಸಲು ಎಲ್ಲಾ ಕಾರ್ಯಕರ್ತರು ಮನೆ ಮನೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಬೈಂದೂರು ವಲಯ ಸಮಿತಿ ಸದಸ್ಯ ಸಂತೋಷ್ ಹೆಮ್ಮಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಎಚ್ ನರಸಿಂಹ, ವೆಂಕಟೇಶ್ ಕೋಣಿ,ರಾಜೀವ ಪಡುಕೋಣೆ ಇದ್ದರು. ಸಮಾವೇಶದ ಅಧ್ಯಕ್ಷತೆ ಜಗದೀಶ್ ಆಚಾರ್ ವಹಿಸಿದ್ದರು. ನರಸಿಂಹ ಹೆಮ್ಮಾಡಿ ವಂದಿಸಿದರು.

Comments are closed.