ಕರಾವಳಿ

ಕುಂದಾಪುರ: ಭಜನಾ ಸ್ಪರ್ಧೆಯ ಫಲಿತಾಂಶ | ಮಹಿಳೆಯರ ವಿಭಾಗದಲ್ಲಿ ಜೈಶ್ರೀರಾಮ ಭಜನಾ ಮಂಡಳಿ ಕಂಚುಗೋಡು-ತ್ರಾಸಿ ಪ್ರಥಮ; ಪುರುಷರ ವಿಭಾಗದಲ್ಲಿ ಶ್ರೀರಾಮ ಭಜನಾ ಮಂಡಳಿ ಬಟ್ಟೆಕುದ್ರು ಪ್ರಥಮ

Pinterest LinkedIn Tumblr

ಕುಂದಾಪುರ: ಕುಂದಾಪುರದ ಶ್ರೀ ನಾರಾಯಣ ಗುರು ರಸ್ತೆಯಲ್ಲಿರುವ ಶ್ರಿ ಸಿದ್ಧಿವಿನಾಯಕ ದೇವಸ್ಥಾನ ಕುಂದಾಪುರ ಇದರ 23ನೇ ವರ್ಧಂತ್ಯುತ್ಸವ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಆವರಣದಲ್ಲಿ ಆಯೋಜಿಸಿದ ಆಯ್ದ ತಂಡಗಳ ಕುಣಿತ ಭಜನಾ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭ ರವಿವಾರ ರಾತ್ರಿ ನಡೆಯಿತು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ 16 ಮಂದಿ ಹಿರಿಯ ಭಜನಾ ಸಾಧಕರನ್ನು ಸನ್ಮಾನಿಸಲಾಯಿತು. ಭಜನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಯರತ್ನ ಚಾರಿಟೇಬಲ್ ಟ್ರಸ್ಟ್ ಮೊಳಹಳ್ಳಿಯ ಪ್ರವರ್ತಕ ದಿನೇಶ್ ಹೆಗ್ಡೆ ಮೊಳಹಳ್ಳಿ, ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಡಾ. ಗೋವಿಂದ ಬಾಬು ಪೂಜಾರಿ, ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಕೋಡಿ, ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಶಿವರಾಮ ಪೂಜಾರಿ ಬಸ್ರೂರು, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ಮಾಣಿ ಗೋಪಾಲ್ ಉಪಸ್ಥಿತರಿದ್ದರು.

ಬಿಲ್ಲವ ಸಮಾಜಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ ಸ್ವಾಗತಿಸಿ, ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ವಂದಿಸಿದರು. ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.

ಫಲಿತಾಂಶ
ಕುಣಿತ ಭಜನಾ ಸ್ಪರ್ಧೆ ಮಹಿಳೆಯರ ವಿಭಾಗ:
ಪ್ರಥಮ- ಜೈಶ್ರೀರಾಮ ಭಜನಾ ಮಂಡಳಿ ಕಂಚುಗೋಡು-ತ್ರಾಸಿ
ದ್ವಿತೀಯ- ಶ್ರೀನಿಧಿ ಮಹಿಳಾ ಭಜನಾ ಮಂಡಳಿ ಬೈಂದೂರು

ಕುಣಿತ ಭಜನಾ ಸ್ಪರ್ಧೆ ಪುರುಷರ ವಿಭಾಗ:
ಪ್ರಥಮ- ಶ್ರೀರಾಮ ಭಜನಾ ಮಂಡಳಿ ಬಟ್ಟೆಕುದ್ರು
ದ್ವಿತೀಯ- ಶ್ರೀರಾಮ ಭಜನಾ ಮಂಡಳಿ ಬೀಜಾಡಿ-ಗೋಪಾಡಿ.

Comments are closed.