ಕರಾವಳಿ

ಕಳೆದುಕೊಂಡ ಮೊಬೈಲ್’ನ್ನು ಸಿ.ಇ.ಐ.ಆರ್ ಪೋರ್ಟಲ್ ಮೂಲಕ ಕೆಲವೇ ಗಂಟೆಯಲ್ಲಿ ಪತ್ತೆಮಾಡಿ ಮರಳಿಸಿದ ಕುಂದಾಪುರ ಪೊಲೀಸರು

Pinterest LinkedIn Tumblr

ಕುಂದಾಪುರ:  ಕಳೆದುಕೊಂಡ ಮೊಬೈಲ್’ನ್ನು ಸಿ.ಇ.ಐ.ಆರ್ ಪೋರ್ಟಲ್ ಮೂಲಕ ಕೆಲವೇ ಗಂಟೆಯಲ್ಲಿ ಪತ್ತೆ ಮಾಡಿ ಕುಂದಾಪುರ ಪೊಲೀಸರು ವಾರೀಸುದಾರಿಗೆ ಮರಳಿಸಿದ್ದಾರೆ.

ಫೆ. 14 ರಂದು ಆನಂದ ಹನುಮಂತ ಸುರಕೋಡ ಎನ್ನುವವರು ಮೊಬೈಲನ್ನು ಕಳೆದುಕೊಂಡ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಮೊಬೈಲನ್ನು ಸಿ.ಇ.ಐ.ಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಿದ್ದು‌ ಕುಂದಾಪುರ ಪೊಲೀಸ್ ಠಾಣೆ ನಿರೀಕ್ಷಕ ಯು.ಬಿ ನಂದಕುಮಾರ್‌ರವರು ಮೊಬೈಲನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಠಾಣಾ ಸಿಬ್ಬಂದಿ ಸಂತೋಷ ಕುಮಾರ್, ತಾಂತ್ರಿಕ ಸಿಬ್ಬಂದಿ ಅಶ್ವಿನ್ ಕುಮಾರ್ ಇದ್ದರು‌.

Comments are closed.